ಕೊಪ್ಪಳ: ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಮಂಗಳವಾರ ಎಣಿಕೆ ಮಾಡಲಾಯಿತು.
ತಹಸೀಲ್ದಾರ್ ಮಂಜುನಾಥ ನೇತೃತ್ವದಲ್ಲಿ ಅಂಜನಾದ್ರಿ ದೇವಸ್ಥಾನ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಅದರಲ್ಲಿ ಜ.2 ರಿಂದ ಫೆ.28ರ ವರೆಗೆ ₹ 11,79,154 ಸಂಗ್ರಹವಾಗಿದೆ.
ಇದರಲ್ಲಿ ನೇಪಾಳ, ಕುವೈತ್ ಸೇರಿ ವಿವಿಧ ದೇಶಗಳ 6 ನಾಣ್ಯಗಳು, 3 ನೋಟು ಸಂಗ್ರಹ ಆಗಿವೆ. ಎಣಿಕೆ ಕಾರ್ಯು ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿ ಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಿತು.
ಕಳೆದ ಜ.31ರಂದು ನಡೆದ ಹುಂಡಿ ಹಣ ಎಣಿಕೆಯಲ್ಲಿ ₹ 26.22 ಲಕ್ಷ ಸಂಗ್ರಹವಾಗಿತ್ತು.
ಗ್ರೇಡ್-2 ತಹಸೀಲ್ದಾರ್ ವಿ.ಎಚ್. ಹೊರಪೇಟಿ, ಶಿರಸ್ತೇದಾರ ಮೈಬೂಬಅಲಿ, ರವಿಕುಮಾರ ನಾಯಕವಾಡಿ, ಅನಂತ ಜೋಶಿ, ಕೃಷ್ಣವೇಣಿ, ತಹಶೀಲ್ದಾರ್ ಕಚೇರಿ ಸಿಬ್ಬಂದಿ ಗುರುರಾಜ, ಶ್ರೀಕಂಠ, ಇಂದಿರಾ, ನಾಗರತ್ನ, ಕವಿತಾ, ಸೌಭಾಗ್ಯ, ಎಸ್.ಕವಿತಾ, ಅನ್ನಪೂರ್ಣ, ಶಿವಕುಮಾರ, ಪವನಕುಮಾರ, ಗಾಯತ್ರಿ, ಶ್ರೀರಾಮ, ಗ್ರಾಮ ಲೆಕ್ಕಾಧಿಕಾರಿಗಳಾದ ಅಭಿಷೇಕ, ಪೂಜಾ, ಮಂಜುನಾಥ ದುಮ್ಮಾಡಿ, ಮಹಾಲಕ್ಷ್ಮಿ, ರಾಜುಭಜಂತ್ರಿ, ಶಿವಮೂರ್ತಿ, ಸಾಣಪುರ ಪಿಕೆಜಿಬಿ ಬ್ಯಾಂಕ್ ಸಿಬ್ಬಂದಿ ಯಶ್ವಂತ್, ಸುನೀಲ್ ಉಪಸ್ಥಿರಿದ್ದರು.