ಬೆಂಗಳೂರು: ಕಾಂಗ್ರೆಸ್ನ ಮಹಾತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆ ಭವಿಷ್ಯ ಒಂದು ವಾರದಲ್ಲಿ ನಿರ್ಧಾರವಾಗಲಿದೆ. ಮೂರು ಕೇಂದ್ರೀಯ ಸ್ವಾಮ್ಯದ ಸಂಸ್ಥೆಗಳು ಅಕ್ಕಿ ನೀಡಲು ಮುಂದಾಗಿದ್ದು ಇವುಗಳ ನಿರ್ಧಾರದ ಮೇಲೆ ರಾಜ್ಯ ಸರ್ಕಾರ ತನ್ನ ತೀರ್ಮಾನ ಕೈಗೊಳ್ಳಲಿದೆ.
ಹೀಗಾಗಿ ಸರ್ಕಾರ ಒಂದು ವಾರಗಳ ಕಾಲ ಸಮಯಾವಕಾಶ ನೀಡಿದೆ. FCI ನೀಡುತ್ತಿದ್ದ ದರಕ್ಕಿಂತ ಈ ಏಜೆನ್ಸಿಗಳ ದರ ಸ್ವಲ್ಪ ಹೆಚ್ಚಳ. FCI ಪ್ರತಿ ಕೆ.ಜಿ ಅಕ್ಕಿಗೆ ಸಾಗಾಣಿಕೆ ವೆಚ್ಚ ಸೇರಿ 36.60 ಪೈಸೆ ನಿಗದಿ ಮಾಡಿತ್ತು. ದರ ಮತ್ತು ಸಾಗಾಣಿಕೆ ವೆಚ್ಚ ಗಮನಿಸಿ ಸರ್ಕಾರ ತೀರ್ಮಾನಕ್ಕೆ ಬರಲಿದೆ. ಸದ್ಯಕ್ಕೆ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅಸಾಧ್ಯ.