ಬೆಂಗಳೂರು: ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗನ್ನ ಜಾರಿ ಮಾಡೋಕೆ ತಿಪ್ಪರಲಾಗ ಹಾಕ್ತಿದೆ. ಈಗಾಗಲೇ ನೂರೆಂಟು ವಿಘ್ನಗಳ ನಡುವೆ ಶಕ್ತಿ, ಗೃಹಜ್ಯೋತಿ ಸ್ಕೀಂ ಜಾರಿ ಮಾಡಿರೋ ಸಿದ್ದು ಸರ್ಕಾರ ಇಂದಿನಿಂದ ಅನ್ನಭಾಗ್ಯ ಯೋಜನೆ ಜಾರಿ ಮಾಡೋಕೆ ಸಿದ್ದತೆ ನಡೆಸಿದೆ. ಅನ್ನ ಭಾಗ್ಯ ಯೋಜನೆ ಫಲಾನುಭವಿಗಳ ಖಾತೆಗೆ ಇಂದು ಸಂಜೆಯಿಂದ್ಲೇ ಹಣ ಜಮೆ ಮಾಡಲು ಮುಂದಾಗಿದೆ.. ಐದು ಗ್ಯಾರಂಟಿಗಳನ್ನ ಘೋಷಣೆ ಮಾಡಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಅನುಷ್ಠಾನ ಭಾರೀ ಸವಾಲು ಎನ್ನಿಸಿದೆ. ಹಲವು ಅಡ್ಡಿ ಆತಂಕಗಳ ನಡುವೆ ಶಕ್ತಿ, ಗೃಹಜ್ಯೋತಿ ಜಾರಿ ಮಾಡಿರೋ ಸರ್ಕಾರ ಇಂದಿನಿಂದ ಮತ್ತೊಂದು ಮಹತ್ವಾಕಾಂಕ್ಷೆ ಅನ್ನಭಾಗ್ಯ ಯೋಜನೆ ಜಾರಿ ಮಾಡ್ತಿದೆ.
ಹೌದು.. ಸಿಎಂ ಸಿದ್ದರಾಮಯ್ಯ ಸರ್ಕಾರ ಮಾತು ಕೊಟ್ಟಂತೆ ಈಗಾಗಲೇ ಶಕ್ತಿ, ಗೃಹಜ್ಯೋತಿ ಜಾರಿ ಮಾಡಿದೆ. ಇದ್ರ ಬೆನ್ನಲ್ಲೇ ಇದೀಗ ಇಂದಿನಿಂದ ಅನ್ನಭಾಗ್ಯ ಯೋಜನೆ ಜಾರಿ ಮಾಡ್ತಿದೆ. ಸರ್ಕಾರ 10 ಕೆಜಿ ಅಕ್ಕಿ ನೀಡುತ್ತೆ ಅಂತ ಹೇಳಿತ್ತು. ಆದ್ರೆ ಅಕ್ಕಿ ಕೊರತೆ ಕಾರಣದಿಂದ 5 ಕೆಜಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ಹಾಕಲಾಗುವುದು ಎಂದು ತಿಳಿಸಲಾಗಿತ್ತು. ಆದರಂತೆ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೇರ ಬ್ಯಾಂಕ್ ವರ್ಗಾವಣೆ ನಾಳೆ ಸಂಜೆಯಿಂದ ಪ್ರಾರಂಭವಾಗಲಿದೆ. ಇಂದು ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಕ್ಕಿ ಪೂರೈಕೆಯಲ್ಲಿ ಕೊರತೆಯನ್ನು ಎದುರಿಸಿದೆ. ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ ನಂತರ ಹಲವು ರಾಜ್ಯಗಳಲ್ಲಿ ಅಕ್ಕಿಗಾಗಿ ಸರ್ಕಾರ ಪ್ರಯತ್ನಿಸಿದ್ದು, ದೊರೆಯದ ಕಾರಣ ಯೋಜನೆಯ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ನಗದು ನೀಡಲು ನಿರ್ಧರಿಸಿದೆ. ತಮ್ಮ ಚುನಾವಣಾ ಪ್ರಣಾಳಿಕೆಯ ಭಾಗವಾಗಿದ್ದ ಯೋಜನೆಯ ಅನುಷ್ಠಾನದಲ್ಲಿ ಕಾಂಗ್ರೆಸ್ ಸರ್ಕಾರವು ತೊಡಕುಗಳನ್ನು ಎದುರಿಸುತ್ತಿದೆ.
ಪ್ರತಿ ಕೆಜಿಗೆ 34 ರೂಪಾಯೊಯಂತೆ ಫಲಾನುಭವಿಗಳ ಖಾತೆಗೆ ನಗದು ಜಮಾ ಮಾಡಲಾಗುತ್ತದೆ. ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅನ್ನಭಾಗ್ಯ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ರಾಜ್ಯದಲ್ಲಿ 1.29 ಕೋಟಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿದ್ದು, 4.41 ಕೋಟಿ ಫಲಾನುಭವಿಗಳಿದ್ದಾರೆ.
ರಾಜ್ಯದಲ್ಲಿ ಪಡಿತರ ಕಾರ್ಡ್ ವಿವಿರ..
– ರಾಜ್ಯದಲ್ಲಿ 1. ಕೋಟಿ 28 ಲಕ್ಷ ಕಾರ್ಡ್ ದಾರರು-
– ಒಟ್ಟು 1 ಕೋಟಿ 28 ಲಕ್ಷ ಕಾರ್ಡ್ ದಾರರಲ್ಲಿ 4 ಕೋಟಿ 42 ಲಕ್ಷ ಫಲಾನುಭವಿಗಳು
– ಒಂದು ಕೋಟಿ 28 ಲಕ್ಷ ಕಾರ್ಡ್ ಗಳ ಪೈಕಿ 99.99 ರಷ್ಟು ಆಧಾರ್ ಕಾರ್ಡ್ ಜೋಡನೆ
– ಸದ್ಯ 1.22 ಕೋಟಿ ಕಾರ್ಡ್ ದಾರರ ಬ್ಯಾಂಕ್ ಅಕೌಂಟ್ ಲಿಂಕ್
– – ಬಾಕಿ ಉಳಿದಿರುವ 6 ಲಕ್ಷ ಕಾರ್ಡ್ ಗಳು ಆಧಾರ್ ಲಿಂಕ್ ಆಗಬೇಕು
– ಆಧಾರ್ ಲಿಂಕ್ ಆಗ್ತಿದ್ದ ಹಾಗೆ ಬ್ಯಾಂಕ್ ಅಕೌಂಟ್ ಕೂಡ ಕಾರ್ಡ್ ಗಳಿಗೆ ಆಪ ಡೇಟ್ ಆಗಲಿದೆ
ಒಟ್ಟಿನಲ್ಲಿ ತನ್ನ ಮಹತ್ವಾಕಾಣಂಕ್ಷೆ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಸಂಗ್ರಹಿಸಲು ಸರ್ಕಾರ ಹೆಣಗಾಡ್ತಿದೆ. ಇದಕ್ಕಾಗಿ 5 ಕೆಜಿ ಅಕ್ಕಿ ಜೊತೆ ಖಾತೆ ಪ್ರತಿ ವ್ಯಕ್ತಿಗೆ 170 ರೂ ಪಾವತಿ ಆಗಲಿದೆ.ಆದ್ರೆ ಸರ್ಕಾರದ ಈ ಪ್ಲಾನ್ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ನೋಡಬೇಕಿದೆ.