ಬೆಂಗಳೂರು:- ಕಬ್ಬನ್ ಪಾರ್ಕ್ನಲ್ಲಿ ಶಬ್ದ ಮಾಲಿನ್ಯ ಹೆಚ್ಚಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಕಬ್ಬನ್ ಪಾರ್ಕ್ನಲ್ಲಿ ವಾಹನಗಳನ್ನ ಬಿಡಬಾರದು ಅಂತ ಹಲವು ದಿನಗಳಿಂದ ವಾಕರ್ಸ್ ಡಿಮಾಂಡ್ ಮಾಡಿಕೊಂಡು ಬರ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದು, ಪ್ರತಿದಿನ ಸಾವಿರಾರು ವಾಹನಗಳು ಕಬ್ಬನ್ ಪಾರ್ಕ್ ನಲ್ಲಿಯೇ ಸಂಚರಿಸುತ್ತಿವೆ. ಹೀಗಾಗಿ ಕಬ್ಬನ್ ಪಾರ್ಕ್ನಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದ್ದು, ಈ ಮಾಲಿನ್ಯವನ್ನ ತಡೆಗಟ್ಟುವ ನಿಟ್ಟಿನಲ್ಲಿ ಕಬ್ಬನ್ ಪಾರ್ಕ್ ಅಸೋಸಿಯೇಷನ್ ವಾಹನಗಳ ಸಂಚಾರವನ್ನ ಸ್ಟಾಪ್ ಮಾಡ್ಬೇಕು. ಇಲ್ಲದಿದ್ದರೆ ಶಬ್ದಮಾಡದಂತೆ ವಾಹನಗಳು ಸಂಚರಿಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಸಧ್ಯ ನಗರದಲ್ಲಿರುವುದೇ ಎರಡೇ ಪಾರ್ಕ್. ಲಾಲ್ ಬಾಗ್ನಲ್ಲಿ ವಾಹನಗಳನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದರಂತೆ ಕಬ್ಬನ್ ಪಾರ್ಕ್ನಲ್ಲಿ ವಾಹನ ನಿಷೇಧಿಸಬೇಕು. ಕೇವಲ ಇ ವೆಹಿಕಲ್ ಗಳಿಗೆ ಮಾತ್ರ ಪರ್ಮಿಷನ್ ನೀಡಬೇಕು. ಇಲ್ಲದಿದ್ದರೆ ಕಬ್ಬನ್ ಪಾರ್ಕ್ ತನ್ನ ನೈಸರ್ಗಿಕತೆಯನ್ನ ಕಳೆದುಕೊಳ್ಳಲಿದೆ ಅಂತ ವಾಕರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ತೋಟಾಗಾರಿಕೆ ಇಲಾಖೆಯ ಜಂಟಿ ಆಯುಕ್ತ ಜಗದೀಶ್ ಅವರನ್ನ ಪ್ರಶ್ನಿದ್ದಕ್ಕೆ ಸಧ್ಯ ಕಬ್ಬನ್ ಪಾರ್ಕ್ನಲ್ಲಿ ನಾಲ್ಕು ಕಡೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಇನ್ನು ಕಬ್ಬನ್ ಪಾರ್ಕ್ನಲ್ಲಿ ಸಂಚರಿಸುವವರು ಹಾರ್ನ್ ಮಾಡಬಾರದು ಅಂತ ನಿಯಮಗಳಿವೆ. ವಾಹನ ಸಂಚಾರಕ್ಕೆ ಮುಕ್ತವಾಗಿ ಸಂಚಾರ ಮಾಡಲು ಸರ್ಕಾರವೇ ತಿಳಿಸಿದೆ. ಇದಲ್ಲದೇ ಶಬ್ದಮಾಲಿನ್ಯ ಉಂಟಾಗದಂತೆ ನೋ ಹಾಕಿಂಗ್ ಜೋನ್ ಅಂತ ತೋಟಾಗಾರಿಕೆ ಇಲಾಖೆ ಮಾಡಿದ್ದು, ಇದರ ಮಧ್ಯೆಯು ಹಾರ್ನ್ ಮಾಡುವುದು ಕಂಡುಬಂದ್ರೆ ಅದನ್ನ ತಡೆಯುವ ಸಲುವಾಗಿ ಟ್ರಾಫಿಕ್ ಪೋಲಿಸರಿಗೂ ತಿಳಿಸಿದ್ದೇವೆ. ಸಾರ್ವಜನಿಕರು ಹಾಗೂ ವಾಹನ ಸವಾರರು ನಮಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.