ಇತ್ತೀಚೆಗೆ ಡಿವೋರ್ಸ್ ಅನ್ನೋದು ಕಾಮನ್ ಆಗಿದೆ. ಅದರಲ್ಲೂ ಸೆಲೆಬ್ರೆಟಿಗಳು ಒಬ್ಬರ ಮೇಲೊಬ್ಬರಂತೆ ಡಿವೋರ್ಸ್ ಗೆ ಮುಂದಾಗಿದ್ದಾರೆ. ಬಿಗ್ ಬಾಸ್ ವೇದಿಕೆ ಮೂಲಕ ಒಂದಾಗಿ ಸಂಸಾರ ಆರಂಭಿಸಿದ ಕೆಲ ಜೋಡಿ ಈಗಾಗಲೇ ಡಿವೋರ್ಸ್ ಪಡೆದುಕೊಂಡಿದೆ. ಇದೀಗ ಬಿಗ್ ಬಾಸ್ 8ರ ಸ್ಪರ್ಧಿ ರೇನೆ ಧ್ಯಾನಿ ತಮ್ಮ ಮದುವೆಯನ್ನು ಸೋಶಿಯಲ್ ಮೀಡಿಯಾ ಮೂಲಕ ರಟ್ಟು ಮಾಡಿದ್ದರು. ಮದುವೆ ಸಂಭ್ರಮದ ವಿಡಿಯೋ ಹಂಚಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ತಿಳಿಸಿದ್ದರು. ಆದರೆ ಮರು ದಿನವೇ ಈ ವಿಡಿಯೋ ಡಿಲೀಟ್ ಮಾಡುವ ಮೂಲಕ ಅನುಮಾನ ಹುಟ್ಟುಹಾಕಿದ್ದಾರೆ.
ಹಿಂದಿ ಬಿಗ್ಬಾಸ್ 8ರಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ರೆನೆ ಧ್ಯಾನಿ ಜುಲೈ 5ರ ರಾತ್ರಿ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು. ಇನ್ಸ್ಟಾಗ್ರಾಂ ಮೂಲಕ ಮದುವೆಯ ಸಂಭ್ರಮದ ಕ್ಷಣಗಳ ವಿಡಿಯೋ ಹಂಚಿಕೊಂಡಿದ್ದರು. ಅರೇಂಜ್ ಮ್ಯಾರೇಜ್ ಇದಾಗಿದ್ದು, ಆದರೆ ಅರೇಂಜ್ ಮ್ಯಾರೇಜ್ ಲವ್ ಮ್ಯಾರೇಜ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದೇನೆ ಎಂದು ಬರೆದುಕೊಂಡಿದ್ದರು.
ಪತಿಯೊಂದಿಗೆ ಕೈ ಕೈ ಹಿಡಿದು ಸಪ್ತಪದಿ ತುಳಿದ ಈ ವಿಡಿಯೋಗೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು, ಸೆಲೆಬ್ರೆಟಿಗಳು, ಆಪ್ತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದರು. ದಾಂಪತ್ಯ ಜೀವನ ಸುಖಕರವಾಗಿರಲೆಂದು ಹಾರೈಸಿದ್ದರು. ಸದ್ದಿಲ್ಲದೆ ರೇನೆ ಧ್ಯಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಕುರಿತು ಯಾವುದೇ ಸುಳಿವು ನೀಡಿರಲಿಲ್ಲ. ಆದರೆ ಮದುವೆ ಬಳಿಕ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದರು.
ಆದರೆ ಮರುದಿನ ಬೆಳಗ್ಗೆಯೇ ಮದುವೆ ವಿಡಿಯೋ, ಪೋಸ್ಟ್ಗಳು ಡೀಲೀಟ್ ಮಾಡಲಾಗಿದೆ. ಜೊತೆಗೆ ಒಂದು ಸಂದೇಶವನ್ನು ನೀಡಿದ್ದರು. ಅನಾನುಕೂಲಕ್ಕಾಗಿ ಕ್ಷಮಿಸಿ, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ. ಆದರೆ ಸರಿಯಾದ ಸಮಯದಲ್ಲಿ ಸರಿಯಾಗಿ ಮಾಹಿತಿ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪತಿ ಜೊತೆಗೆ ಸಂಭ್ರಮದ ನಗುವಿನ ವಿಡಿಯೋ ಹಾಗೂ ಪೋಟೋಗಳು ಇದೀಗ ಡಿಲೀಟ್ ಆಗಿದೆ. ಇದಕ್ಕೆ ಕಾರಣವನ್ನೂ ನೀಡಿಲ್ಲ. ಪೋಸ್ಟ್ ಡಿಲೀಟ್ ಬೆನ್ನಲ್ಲೇ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಅರೇಂಜ್ ಮ್ಯಾರೇಜ್ ಎಂದು ಹೇಳಿದ್ದೀರಿ, ಮರು ದಿನವೇ ಡಿಲೀಟ್ ಮಾಡಿದ್ದೀರಿ, ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ರೇನೆ ಧ್ಯಾನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.