ಬೆಂಗಳೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ಪ್ರೀತಿಸಿದ ಹುಡುಗಿಯ ಮೇಲೆ ಪ್ರಿಯಕರ ಹಾಗು ಸ್ನೇಹಿತನಿಂದ ರೇಪ್.ಪುರುಷೋತ್ತಮ್ ಹಾಗು ಚೇತನ್ ರಿಂದ ಗ್ಯಾಂಗ್ ರೇಪ್.ಪುರುಷೋತ್ತಮ್ ಹಾಗು ಯುವತಿ ಒಂದು ವರ್ಷದಿಂದ ಲವ್ ಮಾಡುತ್ತಿದ್ರು.
ಮೂಲತಹ ತುಮಕೂರಿನ ನಿವಾಸಿಯಾದ ಯುವತಿ.ಫಸ್ಟ್ ಗ್ರೇಡ್ ಕಾಲೇಜ್ ನಲ್ಲಿ ಮೊದಲನೇ ವರ್ಷದ ಪ್ಯಾರಾ ಮೇಡಿಕಲ್ ವಿಧ್ಯಾಬ್ಯಾಸ ಮಾಡಿಕೊಂಡಿದ್ದ ಯುವತಿ.ತುಮಕೂರಿನ ಕೊರಟಗೆರೆ ನಿವಾಸಿ ಪುರುಷೋತ್ತಮ್ ಹಾಗು ಯುವತಿ ಒಂದು ವರ್ಷದಿಂದ ಲವ್.
ಕಳೆದ ಒಂದು ವಾರದ ಹಿಂದೆ ಯುವತಿಯನ್ನ ಭೇಟಿ ಮಾಡಿದ್ದ ಆರೋಪಿ ಪುರುಷೋತ್ತಮ್. ನಂತರ ಯುವತಿಯ ಮೊಬೈಲ್ ಪಡೆದು ಬೆಂಗಳೂರಿಗೆ ಬಂದಿದ್ದವ ಆರೋಪಿ.ಎರಡು ದಿನಗಳ ಹಿಂದೆ ಪ್ರಿಯಕರನಿಗೆ ಕರೆ ಮಾಡಿ ನನ್ನ ಮೊಬೈಲ್ ವಾಪಸ್ ಕೊಡು ಅಂತ ತಿಳಿಸಿದ್ದ ಯುವತಿ.ಈ ವೇಳೆ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಾ,ನಿನ್ನ ಮೊಬೈಲ್ ಕೊಡ್ತಿನಿ ಅಂದಿದ್ದ ಆರೋಪಿ.6 ನೇ ತಾರೀಖು ಬೆಂಗಳೂರಿನ ಮೆಜೆಸ್ಟಿಕ್ ಗೆ ಬಂದಿದ್ದ ಯುವತಿ.ಇನ್ನು ಯುವತಿಯನ್ನ ಗಿರಿನಗರದ ಈರಣ್ಣಗುಡ್ಡೆಯ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಬಂದಿದ್ದ.ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕು ಅಂತ ತಿಳಿಸಿದ್ದ ಯುವತಿ.ಇವತ್ತು ಇಲ್ಲೆ ಇರು ಅಂತ ಹೇಳಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ.
ನಂತರ ತನ್ನ ಸ್ನೇಹಿತ ಚೇತನ್ ಕರೆಸಿದ್ದಾನೆ,ಇಬ್ಬರು ಸೇರಿ ಯುವತಿಯನ್ನ ರೇಪ್ ಮಾಡಿದ್ದಾರೆ.ಯುವತಿಯ ಚೀರಾಟಕ್ಕೆ ಅಕ್ಕಪಕ್ಕದ ಮನೆಯವರು ಬಂದಿದ್ದಾರೆ.
ಕೂಡಲೇ ಗಿರಿನಗರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ ಸ್ಥಳೀಯರು.ಸದ್ಯ ಯುವತಿಯನ್ನ ರಕ್ಷಣೆ ಮಾಡಿ,ಆರೋಪಿಗಳಾದ ಚೇತನ್ ಹಾಗು ಪುರುಷೋತ್ತಮ್ ರನ್ನ ಅರೆಸ್ಟ್ ಮಾಡಿರುವ ಪೊಲೀಸರು.ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.