ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳ ಬಗ್ಗೆ ಈಗಾಗಲೇ ಪೊಲೀಸರು ಸಾಕಷ್ಟು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹ್ವತ್ವದ ಮಾಹಿತಿ ಪೊಲೀಸರ ಕೈ ಸೇರಿದೆ.
ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಬಳಿಕ ಮೃತದೇಹವನ್ನು ಆರೋಪಿಗಳಾದ ನಿಖಿಲ್, ರಾಘವೇಂದ್ರ, ಕಾರ್ತಿಕ್ ಕಾರಿನಲ್ಲಿ ಸಾಗಾಟ ಮಾಡಿದ್ದರು. ಕಾರನ್ನು ಪರಿಶೀಲನೆ ಮಾಡುವಾಗ ಪೊಲೀಸರಿಗೆ ಕೂದಲು ಸಿಕ್ಕಿತ್ತು. ಈ ಕುರಿತು ಪೊಲೀಸರು ಕೆಲ ಮಾಹಿತಿಗಳನ್ನು ಸಂಗ್ರಹ ಮಾಡಿದ್ದರು. ಬಳಿಕ ಆರೋಪಿಗಳ ಕೂದಲು ಮಾದರಿಯನ್ನು ಎಫ್ಎಸ್ಎಲ್ಗೆ ಕಳುಹಿಸಿ ಕೊಟ್ಟಿದ್ದರು.
ಇದೀಗ ಎಫ್ಎಸ್ಎಲ್ನಿಂದ ವರದಿ ಬಂದಿದ್ದು ಕಾರಿನಲ್ಲಿ ರೇಣುಕಾಸ್ವಾಮಿ ಮೃತದೇಹ ಸಾಗಾಟ ಮಾಡಿರೋದು ದೃಢವಾಗಿದೆ. ಇದರ ರಿಪೋರ್ಟ್ ಪೊಲೀಸರ ಕೈಸೇರಿದೆ. ಮೃತದೇಹ ಸಾಗಿಸಿದ್ದ ಅರೋಪಿಗಳಾದ ನಿಖಿಲ್, ರಾಘವೇಂದ್ರ, ಕಾರ್ತಿಕ್ ಅವರ ಕೂದಲು ಅನ್ನೋದು ವರದಿಯಿಂದ ಕನ್ಫರ್ಮ್ ಆಗಿದೆ.