ಕಲಬುರಗಿ: ಬಿಸಿಲ ನಾಡಿನಲ್ಲಿ ಚುನಾವಣಾ ಕಾವು ತೀವ್ರಗೊಂಡಿದ್ದು, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಡಿಜಿಟಲ್ ಪ್ರಚಾರದ ಅಬ್ಬರ ಆರಂಭಿಸಿದ್ದು, ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ವಿಭಿನ್ನ ಮಾರ್ಗವನ್ನು ಅನುಸರಿಸಿ, ಜನಮನ ಸೆಳೆಯುತ್ತಿದ್ದಾರೆ.
ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಮಾಡಿರುವ ಸುಮಾರು 1,600 ಕೋಟಿ ರೂ. ಅನುದಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೃಹತ್ ಡಿಜಿಟಲ್ ವಾಲ್ ಪೇಂಟಿಂಗ್ ಮಾಡಿಸಿದ್ದು, ತಮ್ಮ ಐದು ವರ್ಷಗಳ ರಿಪೋರ್ಟ್ ಕಾರ್ಡ್ ಜನರೆದುರು ಇಡುತ್ತಿದ್ದಾರೆ.
ಇದಲ್ಲದೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕೈಗೊಂಡಿರುವ ಕೆಲಸಗಳನ್ನು ಜನರಿಗೆ ಡಿಜಿಟಲ್ ವಾಲ್ ಪೇಂಟಿಂಗ್ ಮೂಲಕ ಪ್ರಕಟಿಸಿ, ಅಭಿವೃದ್ಧಿಗಾಗಿ ಮತ ನೀಡಿ ಎಂದು ವಿನಂತಿಸುವ ವಿಭಿನ್ನ ಕಾರ್ಯಚಟುವಟಿಕೆ ಆರಂಭಿಸಿರುವ ಶಾಸಕ ಬಸವರಾಜ ಮತ್ತಿಮಡು ಜನಮನ ಸೆಳೆದಿದ್ದಾರೆ. ಗೆಲುವಿನತ್ತ ಸಾಗುತ್ತಿದ್ದಾರೆ.