ಬೆಂಗಳೂರು: ಆತ ಸೀರಿಯಲ್ ನಟ.. ಹೊಸ ವರ್ಷ ಅಂತಾ ಪರಿಚಯ ಆಗಿದ್ದ ಯುವತಿಯನ್ನ ಬಲೆಗೆ ಬೀಳಿಸಿಕೊಂಡಿದ್ದ.. ಮದುವೆಯಾಗ್ತೀನಿ ಅಂತಾ ನಂಬಿಸಿ ಗುಟ್ಟಾಗಿ ಮದುವೆಯೂ ಆಗಿದ್ದ.. ಆದ್ರೆ ಮದ್ವೆಯಾದ ಒಂದು ತಿಂಗಳಲ್ಲೇ ಮತ್ತೊಂದು ನಿಶ್ಚಿತಾರ್ಥ ಮಾಡ್ಕೊಂಡಿದ್ದಾನೆ.. ಅಷ್ಟಕ್ಕೂ ಯಾರು ಆ ನಟ..
ಏನು ಆತನ ಡಬಲ್ ಸ್ಟೋರಿ ಅಂತೀರಾ ಹೇಳ್ತೀವಿ ನೋಡಿ..
ಹೌದು.. ಖ್ಯಾತ ಸೀರಿಯಲ್ ನಲ್ಲಿ ನಟನೆ ಮಾಡಿದ್ದ ನಟನ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ.. ಕಳೆದ ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ನಟ ಈಗ ಬೇರೊಂದು ಯುವತಿಯ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾನೆ.. ಕೇಳೋಕೆ ಹೋದ್ರೆ ನಂಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ ಅಂತಾ ಯುವಯೊಬ್ರು ಗಂಭೀರ ಆರೋಪ ಮಾಡಲಾಗಿದೆ.. ಅಂದ್ಹಾಗೆ ಈ ಆರೋಪ ಕೇಳಿ ಬಂದಿರೋದು ನೇತ್ರಾವತಿ ಸೀರಿಯಲ್ ನಲ್ಲಿ ನಟನೆ ಮಾಡಿದ್ದ ಸನ್ನಿ ಮಹಿಪಾಲ್ ವಿರುದ್ಧ..
ಅಂದ್ಹಾಗೆ ಈ ನಟ ಸನ್ನಿ ಮಹಿಪಾಲ್ ಗೂ ಈಗ ಆರೋಪ ಮಾಡ್ತಿರೋ ಯುವತಿಗೂ ಇದೇ ವರ್ಷದ ಜನವರಿಯಲ್ಲಿ ಪರಿಚಯ ಆಗಿತ್ತಂತೆ.. ಇಬ್ಬರೂ ಸೋಷಿಯಲ್ ಮೀಡಿಯಾ ಮೂಲಕ ಮಾತುಕತೆ ಮಾಡಿದ್ರು.. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸನ್ನಿ ಮಹಿಪಾಲ್ ಆಗಾಗ ಸೀರಿಯಲ್ ಗಳಲ್ಲಿ ನಟನೆ ಮಾಡ್ತಿದ್ದ.. ಜನವರಿಯಲ್ಲಿ ಫೇಸ್ಬುಕ್ ಮೂಲಕ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ ಸನ್ನಿ, ಕೆಲ ದಿನಗಳಲ್ಲೇ ನಿನ್ನ ಪ್ರೀತಿಸ್ತೀನಿ.. ಮುಂದೆ ಮದುವೆಯಾಗೋಣ ಅಂತಾ ಸುತ್ತಾಡಿದ್ದ.. ನಂಬಿಕೆ ಗಳಿಸಿಕೊಂಡು ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ.. ನಂತರ ಗರ್ಭಿಣಿಯಾಗಿದ್ದ ಯುವತಿ ಸನ್ನಿಗೆ ಮದುವೆಯಾಗುವಂತೆ ಒತ್ತಾಯಿಸಿದ್ಳು.. ಆಕೆ ಒತ್ತಾಯಕ್ಕೆ ಮಣಿದಿದ್ದ ಮಹಿಪಾಲ್ ಒಂದಷ್ಟು ಕಂಡಿಷನ್ಸ್ ಹಾಕಿ ಜೂನ್ 15ರಂದು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ನಂತೆ.. ಮದುವೆಯಾದ ಬಳಿಕ ಒಂದು ವಾರವೂ ಜೊತೆಗಿರದ ಸೀರಿಯಲ್ ನಟ ತನ್ನ ಅಪ್ಪ ಅಮ್ಮನನ್ನ ಒಪ್ಪಿಸಿ ಬರ್ತೀನಿ, ಅಲ್ಲಿಯವರೆಗೂ ಇಬ್ಬರೂ ಫ್ರೆಂಡ್ ತರಾ ನೇ ಇರಬೇಕು, ಸ್ನೇಹಿತರಂತೆಯೇ ಮೆಸೆಜ್ ಮಾಡಬೇಕು’ ಅಂತಾ ಕಂಡಿಷನ್ ಹಾಕಿದ್ನಂತೆ.. ನಂತರ ಮಂಗಳೂರಿಗೆ ಹೋಹಿದ್ದ ಆರೋಪಿ ಸನ್ನಿ ಮಹಿಪ್ ಕೆಲ ದಿನಗಳ ಹಿಂದೆ ಅಪ್ಪ ಅಮ್ಮನ ಮುಂದೆಯೇ ಬೇರೊಂದು ಯುವತಿಯೊಂದಿಗೆ ಸನ್ನಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನಂತೆ..
ಇನ್ನು ಮೊದಲೇ ಎರಡು ತಿಂಗಳ ಗರ್ಭಿಣಿಯಾಗಿರುವ ವಿಚಾರ ಗೊತ್ತಾಗಿದ್ದೇ ತಡ ಶಾಕ್ ಆಗಿದ್ದಾಳೆ.., ಈ ಬಗ್ಗೆ ಆರೋಪಿ ಸನ್ನಿಯನ್ನ ಪ್ರಶ್ನಿಸಲು ತಡರಾತ್ರಿ ಹೆಚ್ ಎಎಲ್ ಠಾಣಾ ವ್ಯಾಪ್ತಿ ವಿಜ್ಞಾನ ನಗರದಲ್ಲಿರುವ ಆತನ ನಿವಾಸಕ್ಕೆ ತೆರಳಿದ್ದಳು.. ಈ ವೇಳೆ ಗಲಾಟೆ ಮಾಡಿರುವ ಸನ್ನಿ ಚಾಕುವಿನಿಂದ ಆಕೆಯ ತೋಳಿಗೆ ಇರಿದಿದ್ದಾನೆ ಅಂತಾ ಯುವತಿ ಆರೋಪಿಸಿದ್ದಾರೆ..
ಇನ್ನು ಗಾಯಗೊಂಡು ಸ್ವತಃ ತಾವೆ ಕಾರು ಚಲಾಯಿಸಿಕೊಂಡು ಬಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವತಿ, ಗಲಾಟೆಯಲ್ಲಿ ತಮಗೆ ಗರ್ಭಪಾತವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.. ಈ ಸಂಬಂಧ ಎಚ್ಎಎಲ್ ಠಾಣಾ ಪೊಲೀಸರಿಗೆ ದೂರು ನೀಡಿದ್ದಾಳೆ.. ಸೀರಿಯಲ್ ನಟನ ವಿರುದ್ಧ ಯುವತಿ ಈ ರೀತಿ ಆರೋಪ ಮಾಡ್ತಿದ್ರೆ.. ಅದೇ ಠಾಣೆಯಲ್ಲಿ ತಮ್ಮನ್ನ ಬಲವಂತವಾಗಿ ಮದುವೆಯಾಗಲಾಗಿದೆ, ಮನೆಗೆ ಅತಿಕ್ರಮ ಪ್ರವೇಶಲಾಗಿದೆ’ ಅಂತಾ ಆರೋಪಿಸಿ’ ಹೆಚ್ಎಎಲ್ ಪೊಲೀಸ್ ಠಾಣೆಗೆ ಸನ್ನಿ ಮಹಿಪಾಲ್ ಯುವತಿಯ ವಿರುದಗಧ ಕಂಪ್ಲೆಂಟ್ ಕೊಟ್ಟಿದ್ದಾರಂತೆ.. ಸದ್ಯ ಪೊಲೀಸರು ತನಿಖೆ ನಡೆಸ್ತಿದ್ದು ಅಸಲಿ ವಿಚಾರ ತನಿಖೆ ನಂತರವೇ ಗೊತ್ತಾಗ್ಬೇಕು..