ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೈಶಾಚಿಕ ಕೃತ್ಯಗಳು ಎಗ್ಗಿಲ್ಲದೇ ಸಾಗುತ್ತಿದೆ. ಚಿಕ್ಕಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದಿಂದಾಗಿ ಸಾಕಷ್ಟು ಅಪಖ್ಯಾತಿ ಘಳಿಸಿರುವ ಇದೀಗ ಮತ್ತೊಂದು ಪೈಚಾಕಿಕ ಕೃತ್ಯಕ್ಕೆ ಸಾಕ್ಷಿಯಾಗಿದೆ.
ಪಾಕ್ ನಲ್ಲಿ ನಡೆಯುತ್ತಿರುವ ಶವಗಳ ಮೇಲಿನ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಶವಗಳ ಗೋರಿಗಳಿಗೆ ಬೀಗ ಹಾಕಲಾಗುತ್ತಿದೆ.
ಭೂಮಿಯಲ್ಲಿ ಹೂತಿಟ್ಟ ಶವಗಳನ್ನು ಬಳಿಕ ಹೊರತೆಗೆದು ಅತ್ಯಾಚಾರ ಮಾಡಲಾಗುತ್ತಿರುವ ಘಟನೆಗಳು ನಡೆದಿವೆ. ಇದನ್ನು ತಪ್ಪಿಸಲು ಅಲ್ಲಿನ ಪೋಷಕರು ಶವಸಂಸ್ಕಾರದ ಬಳಿಕ ಗೋರಿಗೆ ಬೀಗ ಹಾಕುತ್ತಿದ್ದು, ಅವುಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಿಳಾ ಶವಗಳನ್ನು ಸಂಸ್ಕಾರ ಮಾಡಿ ಬಂದ ಬಳಿಕ ಅಲ್ಲಿನ ಸ್ಮಶಾನ ಕಾವಲುಗಾರರು ಅದರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಗಳು ನಡೆದಿವೆ. ಈ ಕೃತ್ಯಗಳು ತೀವ್ರ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ಮಾಜಿ ಇಸ್ಲಾಂ ಪ್ರಚಾರಕ ಸುಲ್ತಾನ್ ಎಂಬಾತ ಮಾಹಿತಿ ನೀಡಿದ್ದು, “ಪಾಕಿಸ್ತಾನದಲ್ಲಿ ಲೈಂಗಿಕವಾಗಿ ನಿರಾಶೆಗೊಂಡ ಸಮಾಜ ಸೃಷ್ಟಿಯಾಗಿದೆ. ಶವಗಳ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಜನರು ತಮ್ಮ ಹೆಣ್ಣುಮಕ್ಕಳ ಶವಗಳು ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಅವರ ಸಮಾಧಿಗಳಿಗೆ ಬಾಗಿಲಿನ ಮಾದರಿಯಲ್ಲಿ ಸರಳುಗಳನ್ನು ಜೋಡಿಸಿ, ಅದಕ್ಕೆ ಬೀಗ ಹಾಕುತ್ತಿದ್ದಾರೆ” ಎಂದು ಹೇಳಿದ್ದಾರೆ. ಸುಲ್ತಾನ್, ಮಾಜಿ ಮುಸ್ಲಿಂ ನಾಸ್ತಿಕ ಕಾರ್ಯಕರ್ತನಾಗಿದ್ದಾರೆ. ಇವರು “ದಿ ಕರ್ಸ್ ಆಫ್ ಗಾಡ್, ನಾನು ಇಸ್ಲಾಂ ಅನ್ನು ಏಕೆ ತೊರೆದಿದ್ದೇನೆ” ಎಂಬ ಪುಸ್ತಕವನ್ನು ರಚಿಸಿದ್ದಾರೆ.
2022 ರಲ್ಲಿ, ಪಾಕಿಸ್ತಾನದ ಗುಜರಾತ್ನ ಚಕ್ ಕಮಲಾ ಗ್ರಾಮದಲ್ಲಿ ಕೆಲವು ಕಾಮಾಂಧರು ಹುಡುಗಿಯ ಶವವನ್ನು ಅಗೆದು ಅತ್ಯಾಚಾರ ಮಾಡಿದ್ದರು. ಮೃತ ಬಾಲಕಿಯನ್ನು ಸಮಾಧಿ ಮಾಡಿದ ದಿನದ ಸಂಜೆಯೇ ಈ ಕೃತ್ಯ ನಡೆಸಿದ್ದರು.