ಬೆಂಗಳೂರು: ಉತ್ತರಪ್ರದೇಶದ ಗೊಂಡಾದಲ್ಲಿ ನಡೆಯುತ್ತಿರುವ 17 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿರುವ ಕರ್ನಾಟಕ ರಾಜ್ಯ ಕುಸ್ತಿ ಪಟುಗಳಾದ ಶ್ವೇತ ಅಣ್ಣಕೆರಿ ಚಿನ್ನದ ಪದಕ ಗಳಿಸಿದ್ದು ಅದೇ ರೀತಿ ಮನಿಷ ಸಿದ್ದಿ ಹಾಗೂ ಲಕ್ಷ್ಮೀ ಪಾಟೀಲ್ ಕಂಚಿನ ಪದಕಗಳನ್ನು ಗಳಿಸಿ ಕರ್ನಾಟಕದ ಕೀರ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ
ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿ ನೇತೃತ್ವದಲ್ಲಿ ಕರ್ನಾಟಕ ಕುಸ್ತಿ ತಂಡಕ್ಕೆ ಆಯ್ಕೆಯಾದ ಕುಸ್ತಿಪಟುಗಳ ಪರಿಶ್ರಮದಿಂದ ಚಿನ್ನದ ಪದಕ ಪಡೆದಿರುವುದು ಕರ್ನಾಟಕದ ಹೆಮ್ಮೆಯಾಗಿದೆ. ಇತಿಹಾಸದಲ್ಲೆ ಮೊದಲ ಬಾರಿಗೆ ರಾಷ್ಟೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆದಿರುವುದಾಗಿದೆ.
ಪದಗಳನ್ನು ಗಳಿಸಿದ ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ ಸಂಘದ ಅಧ್ಯಕ್ಷರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಕರ್ನಾಟಕದ ಆರೂವರೆ ಕೋಟಿ ಜನತೆ ಹಾಗೂ ಎಲ್ಲಾ ಕುಸ್ತಿ ಪಟುಗಳ ಪರವಾಗಿ ಅಧ್ಯಕ್ಷರಾದ ಶ್ರೀ ಬಿ. ಗುಣರಂಜನ್ ಶೆಟ್ಟಿ ಅವರು ಪದಕ ತೊಡಿಸಿ ಅಭಿನಂದಿಸಿ ಶುಭ ಹಾರೈಸಿದರು.