ಬೆಂಗಳೂರು: ಬಿಸಲ ಝಳಕ್ಕೆ ಜನ ಬೆಂದು ಹೋಗ್ತಿರೋದು ಒಂದು ಕಡೆ ಆದ್ರೆ, ಸಿಲಿಕಾನ್ ಸಿಟಿಯಲ್ಲಿ ಸರಣಿ ಅಗ್ನಿ ಅವಘಡಗಳು ಸಂಭವಿಸ್ತಿದೆ.ಇಂದು ಮುಂಜಾನೆ ನಿದ್ರೆಯಲ್ಲಿದ್ದ ಚಾಮರಾಜಪೇಟೆ ಜನರು ಕೆಲ ಕಾಲ ಬೆಚ್ಚಿ ಬಿದ್ದಿದ್ದರು. ನೋಡನೋಡುತ್ತಿದ್ದಂತೆ ಇಡೀ ಏರಿಯಾವನ್ನ ದಟ್ಟ ಹೊಗೆ ಅವರಿಸಿತ್ತು. ರಾಜಧಾನಿ ಬೆಂಗಳೂರು ಇಂದು ಬೆಳಗ್ಗೆ ಮತ್ತೊಂದು ಅಗ್ನಿಅವಘಡಕ್ಕೆ ಸಾಕ್ಷಿಯಾಯ್ತು.
ಯೆಸ್ ಬೆಸೀಗೆ ಬಂದಾಗಿನಿಂದ ರಾಜಧಾನಿ ಬೆಂಗಳೂರು ಒಂದಿಲ್ಲೊಂದು ಅಗ್ನಿ ಅವಘಡಕ್ಕೆ ಸಾಕ್ಷಿಯಾಗುತ್ತಿದೆ. ಇಂತಹದೇ ದೊಡ್ಡ ಅಗ್ನಿ ಅವಘಡಕ್ಕೆ ಇಂದು ಮುಂಜಾನೆ ರಾಜಧಾನಿ ಬೆಂಗಳೂರು ಸಾಕ್ಷಿಯಾಯ್ತು ಚಾಮರಾಜಪೇಟೆಯ ಗವಿಪುರಂನಲ್ಲಿರುವ ರಾಜೇಶ್ ಅಗರ್ವಾಲ್ ಎಂಬುವರ ಮಾಲೀಕತ್ವದ ಚೆರ್ರಿ ಏಜೇನ್ಸಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಟೈರ್ ಗೋಡೌನ್ ಒಂದಕ್ಕೆ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿ ಬಿದ್ದಿದೆ.
ಸಾಕಷ್ಟು ಟೈರ್ ಸಂಗ್ರಹಿಸಿದ್ದರಿಂದ ಇಡಿ ಗೋಡೌನ್ ಸುಟ್ಟು ಭಸ್ಮವಾಗಿದ್ದರೆ ಇಡಿ ಏರಿಯಾ ಕೆಲ ಕಾಲ ದಟ್ಟ ಹೊಗೆಯಿಂದ ಅವರಿಸಿಕೊಂಡು ಕೆಲ ಕಾಲ ಏರಿಯಾ ಜನರು ಭಯ ಭೀತರಾಗಿದ್ದರು. ಇನ್ನೂ ಗೋಡೌನ್ ನಲ್ಲಿ ಸುಮಾರು 25 ಕೋಟಿ ಮೌಲ್ಯದ 15 ಸಾವಿರಕ್ಕು ಹೆಚ್ಚು ಟೈರ್ 60 ಸಾವಿರಕ್ಕು ಅಧಿಕ ಟೈರ್ ಟ್ಯೂಬ್ ಸೇರಿದಂತೆ ಬೈಕ್ ಗಳು ಕೂಡ ಇದ್ವು…ಎಲ್ಲವೂ ಸುಟ್ಟು ಕರಕಲಾಗಿದೆ. ಯೆಸ್ ಬೇಸಿಗೆ ಜಾಸ್ತಿಯಾದಂತೆ ನೀರಿನ ಅಭಾವ ರಾಜಧಾನಿ ಬೆಂಗಳೂರಲ್ಲಿ ಇನ್ನಿಲ್ಲದಂತೆ ಕಾಡ್ತಿದೆ…ಅದ್ರಲ್ಲೂ ಅಗ್ನಿ ಅವಘಡಗಳಾದಗಲೂ ನೀರಿನ ಕೊರತೆ ಇದೆ ಎನ್ನುವುದು ಇಂದು ಬಟಾಬಯಲಾಗಿದೆ.
ಯೆಸ್ ಗವಿಪುರಂ ಅಗ್ನಿ ಅವಘಡದ ಸಮಯದಲ್ಲಿ ನೀರಿನ ಕೊರತೆಯಿಂದಾಗಿ ಖಾಸಗಿ ಟ್ಯಾಂಕರ್ ಗಳಿಂದ ನೀರು ತರಿಸಿ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.ಭಾರಿ ಪ್ರಮಾಣದ ಅಗ್ನಿ ಆದ್ದರಿಂದ ಅಕ್ಕ ಪಕ್ಕದ ಅಗ್ನಿಶಾಮಕ ಠಾಣೆಗಳಿಂದಲೂ ನೀರು ತರಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಸತತ ಐದು ಗಂಟೆಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಆದ್ರೆ ಅಗ್ನಿಅವಘಡಗಳಿಗೂ ನೀರಿನ ಅಭಾವ ಇದೆ ಅನ್ನೋ ವಿಚಾರ ಬಯಲಾಗಿದ್ದು ರಾಜಧಾನಿ ಜನರನ್ನ ಆತಂಕಕ್ಕೆ ಹೋಳ್ಗೆಗಗಿದಾರೆ.