ಬೆಂಗಳೂರು:- ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಕರಕಲಾದ ಘಟನೆ ಮಲ್ಲೇಶ್ವರಂನ ಸಂಪಿಗೆ ರಸ್ತೆ ಸಿಗ್ನಲ್ ಬಳಿಯಲ್ಲಿ ಜರುಗಿದೆ.
ಎಲೆಕ್ಟ್ರಿಕ್ ಪರಿಕರಗಳಿಂದ ಬೆಂಕಿ ಹೊತ್ತಿಕೊಂಡು ಬಟ್ಟೆ ಅಂಗಡಿ ಉರಿದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಸಂಪೂರ್ಣ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಾಲೀಕರು ನಿನ್ನೆ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿ ಕ್ಲೋಸ್ ಮಾಡಿಕೊಂಡು ಮನೆಗೆ ತೆರಳಿದ್ದರು. ಅಂಗಡಿ ಕ್ಲೋಸ್ ಮಾಡುವಾಗ ಕಂಪ್ಯೂಟರ್ ಆನ್ ಮಾಡಿ ಹಾಗೆ ಹೋಗಿದ್ದರು. ಮೊದಲಿಗೆ ಕಂಪ್ಯೂಟರ್ನಲ್ಲಿ ಕಾಣಿಸಿಕೊಂಡಿದೆ. ಕಂಪ್ಯೂಟರ್ನಲ್ಲಿ ಕಾಣಿಸಿಕೊಂಡ ಬೆಂಕಿ ಸಮೀಪದ ಬಟ್ಟೆಗೆ ತಗುಲಿ ಇಡೀ ಬಟ್ಟೆ ಅಂಗಡಿಯಲ್ಲಿದ್ದ ಎಲ್ಲ ಬಟ್ಟೆಗೆ ಬೆಂಕಿ ಹೊತ್ತಿಕಕೊಂಡು ಉರಿದಿದೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.