ಹಾಸನ: ಭಾರೀ ಮಳೆಗೆ ಶಿರಾಡಿ ಘಾಟ್ ರಸ್ತೆ ಸಂಪರ್ಕ 3ನೇ ದಿನವೂ ಬಂದ್ ಆಗಿದೆ. ಇಂದು ಸಹ ಗುಡ್ಡ ತೆರವು ಕಾರ್ಯ ಮುಂದುವರಿದಿದ್ದು, ಗುಡ್ಡದ ಮಣ್ಣಿನಡಿ ಸುಲುಕಿದ್ದ ವಾಹನಗಳು ಹೊರ ತೆಗೆಯಲಾಗುತ್ತಿದೆ. ಬೆಂಗಳೂರು-ಮಂಗಳೂರು ಸಂಪರ್ಕ ಬಂದ್ ಮಾಡಲಾಗಿದ್ದು, ಮುಖ ಹೆದ್ದಾರಿ ಬಂದ್ನಿಂದ ಕಿಮೀಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಜನರು ಪರ್ಯಾವಾಗಿ ಚಾರ್ಮಾಡಿ ಹಾಗೂ ಸಂಪಾಜೆ ರಸ್ತೆಯನ್ನ ಬಳಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಹೇಳಿದ್ದೇನು?
ಇದಕ್ಕೂ ಮುನ್ನ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಸ್ಥಳಕ್ಕೆ ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಎನ್ಹೆಚ್ಎಐ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಜಿಲ್ಲಾಧಿಕಾರಿ ಜೊತೆ ಸಕಲೇಶಪುರ ಎ.ಸಿ ಶೃತಿ ಹಾಗೂ ತಹಶೀಲ್ದಾರ್ ಮೇಘನಾ ಸಾಥ್ ನೀಡಿದ್ದರು.
ಇದರ ನಡುವೆ ಮಣ್ಣು ತೆರವು ಕಾರ್ಯಾಚರಣೆ ಮುಗಿಯುವ ವರೆಗೆ ಶಿರಾಡಿ ಘಾಟ್ ಸಂಚಾರ ಬಂದ್ ಇರಲಿದ್ದು, ಪರ್ಯಾಯ ಮಾರ್ಗವಾಗಿ ಮಂಗಳೂರು, ಬೆಂಗಳೂರಿಗೆ ಸಂಚರಿಸಲು ಸೂಚನೆ ನೀಡಲಾಗಿದೆ. ಅಂದಹಾಗೇ, ಕಳೆದ ಹದಿನೈದು ದಿನಗಳಿಂದ ದೊಡ್ಡತಪ್ಪಲೆ ಬಳಿ ಗುಡ್ಡ ಕುಸಿತ ಸಂಭವಿಸುತ್ತಿದ್ದು, ಅದೃಷ್ಟವಶಾತ್ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದರು.
ಒಂದು ಟ್ಯಾಂಕರ್ ಹೊರ ತಂದಿದ್ದ ಅಧಿಕಾರಿಗಳು