ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾರಿನ ಬ್ಯಾನೆಟ್ ಮೇಲೆ ಕುಳಿತವನನ್ನು 400 ಮೀಟರ್ನಷ್ಟು ದೂರ ಎಳೆದೊಯ್ದು ಹುಚ್ಚಾಟ ಮೆರೆದಿದ್ದಾರೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಕಾರು ಚಲಾಯಿಸಿರೋ ಭಯಾನಕ ದೃಶ್ಯ ಸೆರೆಯಾಗಿದೆ.ʼ
ನಗರದ ಸರ್ಕಲ್ ಮಾರಮ್ಮ ದೇವಸ್ಥಾನ ಬಳಿ ಮೊಹಮ್ಮದ್ ಮುನೀರ್ ಎಂಬಾತನಿಂದ ಕೃತ್ಯ ನಡೆದದಿದ್ದು 400 ಮೀಟರ್ ನಷ್ಟು ದೂರ ಬ್ಯಾನೆಟ್ ಮೇಲೆ ಎಳೆದೊಯ್ದ ಚಾಲಕ . ಕ್ಯಾಬ್ ಚಾಲಕ ಅಶ್ವತ್ಥ್ ನನ್ನ ಬ್ಯಾನೆಟ್ ಮೇಲೆ ಹೊತ್ತಯ್ದ ಮುನೀರ್ ಜನವರಿ 15 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ.
ಚಾಲಕ ಮುನೀರ್ ಅನ್ನು ಕಾರು ನಿಲ್ಲಿಸುವಂತೆ ಕ್ಯಾಬ್ ಡ್ರೈವರ್ ಅಶ್ವತ್ಥ್ ದುಂಬಾಲು ಬಿದ್ದಿದ್ದಾನೆ. ಈ ವೇಳೆ ಕಾರು ನಿಲ್ಲಸದೇ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಕ್ಯಾಬ್ ಡ್ರೈವರ್ ಕಾರಿನ ಮುಂದೆ ನಿಂತು ಕೆಳಗೆ ಬರುವಂತೆ ಪಟ್ಟು ಹಿಡಿದಿದ್ದಾನೆ. ಆಗ ತಕ್ಷಣವೇ ಚಾಲಕ ಕಾರು ಚಲಾಯಿಸಿದ್ದಾನೆ.
18ನೇ ಕ್ರಾಸ್ ಸಿಗ್ನಲ್ವರೆಗೆ ಬ್ಯಾನೆಟ್ ಮೇಲೆ ಎಳೆದೊಯ್ದಿದಿದ್ದು ಸ್ಥಳೀಯರು ಹಿಂದೆ ಹಿಂದೆ ಓಡಿಬಂದ್ರು ಚಾಲಕ ಕಾರು ನಿಲ್ಲಿಸದೆ ಹೋಗಿದ್ದಾನೆ. ಸಡನ್ ಆಗಿ ಬ್ರೇಕ್ ಹೊಡೆದು ಬ್ಯಾನೆಟ್ ಮೇಲಿದ್ದವನನ್ನು ಕೆಳಗೆ ಬೀಳಿಸಲು ಯತ್ನಿಸಲಾಗಿದೆ.
ಬ್ಯಾನೆಟ್ ಮೇಲೆ ಕ್ಯಾಬ್ ಚಾಲಕ ಅಶ್ವತ್ಥ್ ಮಲಗಿದ್ರೂ ಚಾಲಕ ಮುನೀರ್ ಕೇರ್ ಮಾಡದೇ ಹಾಗೆಯೇ ಕಾರು ಚಲಾಯಿಸಿಕೊಂಡು ಹೊರಟಿದ್ದಾನೆ. ಸಿಗ್ನಲ್ ಬಳಿ ಹೋಗ್ತಿದ್ದಂತೆ ಕಾರು ಅಡ್ಡಗಟ್ಟಿದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಮಲ್ಲೇಶ್ವರಂ ಹೊಯ್ಸಳ ಸಿಬ್ಬಂದಿ ಕೂಡಲೇ ಕಾರು ಚಾಲಕನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ