ಬಿಗ್ ಬಾಸ್ 10 ಸೀಸನ್ ಮುಗಿಸಿ ಇದೀಗ 11ನೇ ಸೀಸನ್ ಶುರುವಾಗಿದೆ. ಪ್ರತಿಯೊಂದು ಸೀಸನ್ ನಲ್ಲೂ ಒಂದೊಂದು ಜೋಡಿಗಳು ಬಿಗ್ ಮನೆಯಲ್ಲಿ ಹುಟ್ಟಿಕೊಂಡಿತ್ತು. ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡ ಕೆಲವೊಂದು ಪ್ರೀತಿ ಯಶಸ್ಸು ಕಂಡಿದ್ದು ಇನ್ನೂ ಕೆಲ ಪ್ರೀತಿ ದೊಡ್ಮನೆಯಿಂದ ಹೊರ ಬರುತ್ತಿದ್ದಂತೆ ಸೈಲೆಂಟ್ ಆಗಿ ಬಿಟ್ಟಿದೆ. ಅಂತೆಯೇ ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಮೂಡುವ ಸೂಚನೆ ಸಿಕ್ಕಿದ್ದು, ಈ ಬಗ್ಗೆ ಹಲವರು ಪ್ರಶ್ನೆ ಮಾಡ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಏನೇ ಮಾಡಿದ್ರು ಹೈಲೈಟ್ ಆಗಬೇಕು. ಹಾಗಿದ್ರೆ ಮಾತ್ರವೇ ತಾವು ಹೆಚ್ಚು ದಿನ ಇಲ್ಲಿ ಗುರುತಿಸಿಕೊಳ್ಳೋಕೆ ಸಾಧ್ಯ ಅನ್ನೋ ಲೆಕ್ಕಾಚಾರ ಸ್ಪರ್ಧಿಗಳಲ್ಲಿ ಇದ್ದಂತಿದೆ. ಅದೇ ಕಾರಣಕ್ಕೆ ಕೆಲವರು ತಮ್ಮ ಮಾತನ್ನೇ ಬಂಡವಾಳ ಮಾಡಿಕೊಂಡರೆ ಮತ್ತೊಂದಷ್ಟು ಮಂದಿ ತಮ್ಮ ಕೆಲಸಗಳಿಂದ ಅವುಗಳನ್ನು ಪ್ರೂವ್ ಮಾಡ್ತಿದ್ದಾರೆ.ಇನ್ನೂ ಕೆಲವರು ಪ್ರೀತಿ ಗೀತ ಅಂತ ಶುರು ಮಾಡಿಕೊಳ್ತಿದ್ದಾರೆ. ಇನ್ನೂ ಈ ಭಾರಿ ಐಶ್ವರ್ಯಾ ಹಾಗೂ ಧರ್ಮ ಲವ್ ಸ್ಟೋರಿ ಶುರುವಾಗೋ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಹಾಗೂ ಧರ್ಮ ಹೆಚ್ಚಿನ ಸಮಯ ಒಟ್ಟಾಗಿ ಕಳೆಯುತ್ತಿದ್ದಾರೆ. ಒಟ್ಟಿಗೆ ಅಡುಗೆ ಮಾಡೋದು ನಡೆಯುತ್ತಿದೆ. ಕಂಟೆಂಟ್ಗೋಸ್ಕರ ಲವ್ ಆಗುತ್ತಾ’ ಎಂದು ಅನುಷಾ ಅವರು ಚೈತ್ರಾ ಬಳಿ ಪ್ರಶ್ನೆ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ನಲ್ಲಿ ಐಶ್ವರ್ಯಾ ಅವರು ಧರ್ಮ ಅವರ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಇವರ ಮಧ್ಯೆ ಪ್ರೀತಿ ಮೂಡಿತೇ ಎನ್ನುವ ಪ್ರಶ್ನೆ ಮೂಡಿದೆ. ಈ ವಿಚಾರದ ಬಗ್ಗೆ ಚರ್ಚೆಗಳು ನಡೆದಿವೆ.
‘ನನಗೆ ಹೊರಗೆ ಬಾಯ್ಫ್ರೆಂಡ್ ಇಲ್ಲ. ಎಂಗೇಜ್ಮೆಂಟ್ ಕೂಡ ಆಗಿಲ್ಲ. ಯಾರಾದರೂ ಪ್ರೀತಿ ಕೊಡ್ತೀನಿ ಎಂದು ಬಂದರೆ ನಾನು ಅದಕ್ಕೆ ಸಿದ್ಧ. ಅರ್ಹ ವ್ಯಕ್ತಿ ಬಂದು ಅವನೇ ಕೇಳಿದರೆ ಯೆಸ್ ಎಂದು ಹೇಳುತ್ತೇನೆ’ ಎಂದಿದ್ದಾರೆ ಅನುಷಾ ರೈ.
ಕೆಲವರು ಹೈಲೈಟ್ ಆಗಬೇಕು ಎಂಬ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಲವ್ ಮಾಡಿದ್ದೂ ಇದೆ. ಬಿಗ್ ಬಾಸ್ನಿಂದ ಹೊರ ಹೋದ ಬಳಿಕ ನಾನ್ಯಾರೋ ನೀನ್ಯಾರೋ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮದುವೆಯಾಗಿದ್ದಾರೆ ಜೊತೆಗೆ ಡಿವೋರ್ಸ್ ಕೂಡ ಪಡೆದುಕೊಂಡಿದ್ದಾರೆ. ಸದ್ಯ ಆರಂಭದ ಹಂತದಲ್ಲಿರುವ ಧರ್ಮ ಹಾಗೂ ಐಶ್ವರ್ಯಾ ಪ್ರೀತಿ ಏನಾಗುತ್ತೆ ಕಾದು ನೋಡಬೇಕಿದೆ.