ಬೆಂಗಳೂರು: ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ಜನ ಬೆಂದು ಹೋಗಿದ್ದಾರೆ. ಇದ್ರ ನಡುವೆ ನಡುವೆ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು ಮತ್ತೆ ಹಾಲಿನ ದರ ಪರಿಷ್ಕರಣೆ ಮಾಡಲು ಕೆಎಂಎಫ್ ಮುಂದಾಗಿದೆ. ಈ ಕುರಿತು ಜನವರಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು KMF ರೆಡಿಯಾಗಿದೆ.ಹಾಗಾದ್ರೆ ಯಾವೆಲ್ಲಾ ಹಾಲು ಎಷ್ಟೆಷ್ಟು ಆಗುತ್ತೆ ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
ರಾಜ್ಯದ ಜನರಿಗೆ ಒಂದಲ್ಲ ಒಂದು ಬೆಲೆ ಏರಿಕೆ ಬಿಸಿ ಬೀಳ್ತಾನೆ ಇದೆ. ಈಗಾಗಲೇ ಹಲವು ಬೆಲೆ ಏರಿಕೆಯಿಂದ ತತ್ತರಿಸಿರೋ ಜನತೆಗೆ ಶೀಘ್ರದಲ್ಲೇ ನಂದಿನಿ ಹಾಲಿನ ದರವೂ ಹೆಚ್ಚದ ಮುನ್ಸೂಚನೆ ಸಿಕ್ಕಿದೆ. ಆರ್ಥಿಕ ನಿರ್ವಹಣೆ ನಷ್ಟದ ಹಿನ್ನಲೆ ನಂದಿನಿ ಹಾಲು ಪರಿಷ್ಕರಣೆಗೆ ಅನುಮತಿ ನೀಡುವಂತೆ ಸರ್ಕಾರದ ಕದ ತಟ್ಟಲು ಕೆಎಂಎಫ್ ನಿರ್ಧಾರ ಮಾಡಿದೆ. ಹೌದು.. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು.
ಇದೀಗ ಹಾಲಿನ ದರ ಮತ್ತೆ ಹೆಚ್ಚಳ ಮಾಡಲು ಕೆಎಂಎಫ್ ಸಿದ್ದತೆ ನಡೆಸಿಕೊಳ್ಳುತ್ತಿದೆ. ಈಗಾಗಲೇ ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಚಿಂತನೆ ನಡೆದಿದೆ. ಹಾಲಿನ ದರ ಪರಿಷ್ಕರಣೆಗೆ 14 ಹಾಲು ಒಕ್ಕೂಟದಿಂದ ಕೆಎಂಎಫ್ ಗೆ ಮನವಿ ಬಂದಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲೆ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಸಿಎಂ ಸಿದ್ರಾಮಯ್ಯ ಅವರನ್ನು ಜನವರಿ ಆರಂಭದಲ್ಲಿ ಭೇಟಿಯಾಗಲು ಕೆಎಂಎಫ್ ಅಧ್ಯಕ್ಷ, ಎಂಡಿ ನಿರ್ಧರಿಸಿದ್ದಾರೆ.
ಕೆಎಂಎಫ್ ಆರ್ಥಿಕ ನಷ್ಟದ ಹಿನ್ನಲೆ 5 ರೂ ಪ್ರತಿ ಲೀಟರ್ ಗೆ ದರ ಹೆಚ್ಚಿಸುವಂತೆ ಮನವಿ ಮಾಡಲು ನಿರ್ಧರಿಸಿದೆ. ಕಳೆದ ಆಗಸ್ಟ್ 1 ರಿಂದ ನಂದಿನಿ ಪ್ರತೀ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿತ್ತು. 5 ರೂ ಹೆಚ್ಚಳ ಮಾಡಲು ಮನವಿ ಮಾಡಿದ್ದಕ್ಕೆ ಕೇವಲ ಮೂರು ರೂಪಾಯಿ ಹೆಚ್ಚಳ ಮಾಡಿತ್ತು. ಹೀಗಾಗಿ ಲೀಟರ್ ಗೆ 3 ರೂ ಹೆಚ್ಚುವರಿ ಹಣ ರೈತರಿಗೆ ಕೆಎಂಎಫ್ ನೀಡಿತ್ತು. ಆದರೆ ಒಕ್ಕೂಟಗಳಿಂದ ದರ ಏರಿಕೆ ಆದ್ರೂ ಅವರಿಗೆ ಹೆಚ್ಚುವರಿ ಹಣ ನೀಡಿದ್ದಿಲ್ಲ. ಹೀಗಾಗಿ ನಷ್ಟದ ಸರಿದೂಗಿಸಲು ದರ ಪರಿಷ್ಕರಣೆ ಮಾಡಿ ಎಂದು ಒಕ್ಕೂಟಗಳು ಪಟ್ಟು ಹಿಡಿದಿವೆ.
ಯಾವ್ಯಾವ ಹಾಲು ಎಷ್ಟಿದೆ- ಎಷ್ಟಾಗುತ್ತೆ? (2 ರೂ ಹೆಚ್ಚಳದಂತೆ)
ಟೋನ್ಡ್ ಹಾಲು (ಬ್ಲೂ ಪ್ಯಾಕೆಟ್) 42 ರೂ- 44ರೂ
ಹೋಮೋಜಿನೈಸ್ಡ್ ಹಾಲು 43 ರೂ-45ರೂ
ಹೋಮೋಜಿನೈಸ್ಡ್ ಹಸುವಿನ ಹಾಲು 47 ರೂ-49ರೂ
ಸ್ಪೆಷಲ್ ಹಾಲು 48 ರೂ – 50ರೂ
ಶುಭಂ ಹಾಲು 48 ರೂ- 50ರೂ
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು 49 ರೂ-51ರೂ
ಸಮೃದ್ಧಿ ಹಾಲು 53 ರೂ-_55ರೂ
ಸಂತೃಪ್ತಿ ಹಾಲು 55 ರೂ-57ರೂ
ಡಬಲ್ಡ್ ಟೋನ್ಡ್ ಹಾಲು 41 ರೂ-43ರೂ
ಮೊಸರು ಪ್ರತಿ ಲೀಟರ್ಗೆ 50 ರೂ-52ರೂ
ದರ ಏರಿಕೆ ಬಿಸಿಯಿಂದ ತತ್ತರಿಸುತ್ತಿರುವ ಶ್ರೀಸಾಮಾನ್ಯನಿಗೆ ಮತ್ತೆ ಹಾಲಿನ ದರ ಏರಿಕೆ ಬಿಸಿ ಶುರುವಾಗಿದೆ. ಇದಕ್ಕೆ ಸರ್ಕಾರ ಕೆಎಂಎಫ್ ದರ ಏರಿಕೆ ಪ್ರಸ್ತಾವನೆಗೆ ಯಾವ ನಿರ್ಧಾರ ಕೈಗೊಳ್ಳುತ್ತೋ? ಕಾದು ನೋಡಬೇಕು.