ಬೆಂಗಳೂರು:- ಬಹುಜನ ಸಮಾಜವಾದಿ ಪಾರ್ಟಿ ಮುಖಂಡನಿಂದ ಯುವಕನ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ.
ಕೆಲಸದ ನಿಮ್ಮಿತ್ತ ತೆರಳುತ್ತಿದ್ದ ಪುನೀತ್ ಎಂಬಾತನ ಗಾಡಿಗೆ ಹಲಸೂರು ಕೆರೆ ಬಳಿ ಬಿಎಸ್ಪಿ ಸ್ಟೇಟ್ ಜನರಲ್ ಸೆಕ್ರೆಟರಿ ಬೋರ್ಡ್ ಇರುವ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಕಾರಿನಲ್ಲಿದ್ದವರನ್ನ ಡಿಕ್ಕಿ ಹೊಡೆದ ಬಗ್ಗೆ ಪ್ರಶ್ನೆ ಮಾಡಿದಾಗ, ಕಾರಿನಲ್ಲಿದ್ದ ಮೂವರು ಪುನೀತ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಪುನೀತ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.