ಬೆಂಗಳೂರು: ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಅನ್ನೋ ಗಾದೆ ಮಾತು ಇವತ್ತಿನ ಫುಡ್ ಸ್ಟೈಲ್ ಗೆ ಬಹಳ ಹೊಲಿಕೆಯಾಗ್ತಿದೆ.. ನಾವು ಪ್ರತಿನಿತ್ಯ ಸೇವಿಸುತ್ತಿರೋ ಆಹಾರದ ಗುಣಮಟ್ಟ ಕಳಪೆಯಾಗ್ತಿದ್ದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ.. ಗೋಬಿಯಿಂದ ಶುರುವಾದ ಹಾನಿಕಾರಕ ಅಂಶ ಈಗ ಶವರ್ಮಾಗೂ ಬಂದು ನಿಂತಿದೆ. ಏನೀದು ಶವರ್ಮಾದ ಗುಣಮಟ್ಟದ ಕತೆ ಅಂತೀರಾ ಈ ಸ್ಟೋರಿ ನೋಡಿ..
ಹೌದು, ಗೋಬಿ, ಕಬಾಬ್,ಕಾಟನ್ ಕ್ಯಾಂಡಿ, ಪಾನಿಪುರಿಯಲ್ಲಿ ಬಳಸುವ ಬಣ್ಣಗಳಲ್ಲಿ, ಮತ್ತು ಕೆಲ ವಸ್ತುಗಳಲ್ಲಿ ಆರೋಗ್ಯಕ್ಕೆ ಮಾರಕವಾಗುವ ರಾಸಾಯನಿಕ ವಸ್ತುಗಳು ಪತ್ತೆಯದ ಹಿನ್ನಲೆಯಲ್ಲಿ ಅವುಗಳ ನಿಷೇಧವನ್ನ ಆಹಾರ ಇಲಾಖೆ ಮಾಡಿದ್ದು ಈಗ ಶವರ್ಮಾವನ್ನ ಸಹ ಆಹಾರ ಮತ್ತು ಗುಣಮಟ್ಟ ಇಲಾಖೆ ಪರೀಶೀಲನೆ ನಡೆಸಿದೆ..
ಶವರ್ಮಾ ಸೇವನೆಯಿಂದ ಯುವಕನೊಬ್ಬ ಪುಡ್ ಪಾಯಿಸನ್ ಆಗಿ ಆಸ್ಪತ್ರೆಗೆ ಸೇರಿದ್ದ ವರದಿ ಬೆನ್ನಲ್ಲೇ ಹೆಚ್ಚೆತ್ತ ಸರ್ಕಾರ ರಾಜ್ಯದ ೧೭ ಕಡೆ ಶವರ್ಮಾದ ಗುಣಮಟ್ಟವನ್ನ ಪರೀಶೀಲನೆ ನಡೆಸಿದ್ದು, ಇದರಲ್ಲಿ ೮ ಕಡೆ ಈಸ್ಟ್ ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ.. ಇದನ್ನ ಗಂಭೀರವಾಗಿ ಪರಿಗಣಿಸಿರೋ ಸರ್ಕಾರ ಇತಂಹ ಕಳಪೆ ಗುಣಮಟ್ಟದ ಶವರ್ಮಾ ನೀಡ್ತಿರೋ ಹೋಟಲ್ ಗಳಿಗೆ ನೋಟಿಸಿ ನೀಡಿದೆ..
ಜೊತೆಗೆ ಎಲ್ಲಿ ಶವರ್ಮಾ ಮಾಡ್ತಾರೋ ಅಂತಹ ಹೋಟಲ್ ನವ್ರು ಸುರಕ್ಷಿತೆ ಮತ್ತು ಸುಚಿತ್ವದ ಜೊತೆಗೆ ಡೈಲಿ ಪ್ರೇಶ್ ಶವರ್ಮಾ ನೀಡುವಂತೆ ಸೂಚಿಸಿದ್ದು, FSSAL ನಿಂದ ಅನುಮತಿ ಕೂಡ ಪಡೆಯುವಂತೆ ಆದೇಶಿಸಿದೆ.. ಒಂದು ವೇಳೆ ಶವರ್ಮಾದಲ್ಲೂ ರೋಗಕಾರಕ ಸೂಕ್ಷ್ಮಜೀವಿಗಳು ಕಂಡು ಬಂದ್ರೇ ಶವರ್ಮಾವನ್ನ ಕೂಡ ಬ್ಯಾನ್ ಮಾಡೋ ಚಿಂತನೆಯನ್ನ ಸರ್ಕಾರ ನಡೆಸಿದೆ..
ಒಟ್ಟಾರೆಕಳೆದ ಕೆಲ ದಿನಗಳ ಹಿಂದೆ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್ ಹಾಗೂ ಪಾನಿಪುರಿಯಲ್ಲಿ ಹಾನಿಕಾರಕ ಅಂಶಗಳು ಬಳಸುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೆಲವು ಪದಾರ್ಥಗಳನ್ನು ಬಳಸದಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಶವರ್ಮಾದಲ್ಲೂ ಹಾನಿಕಾರಕ ಅಂಶ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.