ಮುಂಬೈ: ಲೋಕಸಭೆ ಚುನಾವಣೆ ಸನಿಹದಲ್ಲೇ ಕಾಂಗ್ರೆಸ್ಸಿಗೆ ಮಹಾ ಶಾಕ್ ಆಗಿದೆ. ಹೌದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಕಾಂಗ್ರೆಸ್ʼಗೆ ರಾಜೀನಾಮೆ ನೀಡಿದ್ದಾರೆ. ಚವಾಣ್ ಅವರು ಪಕ್ಷದ ಬಗ್ಗೆ ಅತೃಪ್ತರಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಇತ್ತ ಬಿಜೆಪಿ ಕಚೇರಿ ಕಾಂಗ್ರೆಸ್ ಮುಖಂಡನ ಪ್ರವೇಶಕ್ಕೆ ಸಿದ್ಧತೆ ನಡೆದಿದೆ. ಆದಾಗ್ಯೂ, ಅಶೋಕ್ ಚವಾಣ್ ಮಾತ್ರ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ಅಶೋಕ್ ಚವಾಣ್ ಅವರು ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಅವರನ್ನು ಭೇಟಿ ಮಾಡಿದರು. ಆ ನಂತರ ಮುಂಬೈನ ಬಿಜೆಪಿ ಕಚೇರಿಗೆ ಬಿಜೆಪಿಯ ದೊಡ್ಡ ನಾಯಕರು ಬಂದಿದ್ದಾರೆ. ಮುಖಂಡರಾದ ದೇವೇಂದ್ರ ಫಡ್ನವೀಸ್, ಆಶಿಶ್ ಶೆಲಾರ್, ಮಂಗಲಪ್ರಭಾತ್ ಲೋಧಾ ಬಿಜೆಪಿ ಕಚೇರಿಗೆ ಬಂದಿದ್ದು ದೇವೇಂದ್ರ ಫಡ್ನವೀಸ್ ಸಮ್ಮುಖದಲ್ಲಿ ಚವಾಣ್ ಬಿಜೆಪಿ ಸೇರಲಿದ್ದಾರೆ ಎಂದು ವರದಿ ಆಗಿದೆ.