ಮುಂಬೈ: ಎರಡೂ ಕೈಗಳನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಇದೀಗ ಎರಡೂ ತೋಳುಗಳನ್ನು ಶಸ್ತ್ರಚಿಕಿತ್ಸೆಯ (Arm Transplant) ಮೂಲಕ ಜೋಡಣೆ ಮಾಡುವಲ್ಲಿ ಮುಂಬೈ ವೈದ್ಯರು ಯಶಸ್ವಿಯಾಗಿದ್ದಾರೆ.ಪ್ರೇಮಾ ರಾವ್ (33) ಎರಡೂ ಕೈಗಳನ್ನು ಕಳೆದುಕೊಂಡಿರುವ ವ್ಯಕ್ತಿ.
ರಾಜಸ್ಥಾನದ ಅಜ್ಮೀರ್ (Rajasthan’s Ajmer) ಮೂಲದವರಾಗಿರುವ ಇವರಿಗೆ ಸದ್ಯ ಯಶಸ್ವಿಯಾಗಿ ತೋಳುಗಳ ಕಸಿ ಮಾಡಲಾಗಿದ್ದು, ಏಷ್ಯಾ (Asia) ದಲ್ಲಿಯೇ ಇದು ಮೊದಲ ಯಶಸ್ವಿ ಪ್ರಯತ್ನವಾಗಿದೆ. ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡವು ನಿರಂತರವಾಗಿ 16 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ತೋಳುಗಳ ಕಸಿಯನ್ನು ಮಾಡುವಲ್ಲಿ ಯಶಸ್ವಿಯಾಗಿದೆ.
ಕೈಗಳನ್ನುಕಳೆದುಕೊಂಡಿದ್ದುಹೇಗೆ..?: ಕಳೆದ 10 ವರ್ಷದ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರೇಮಾ ರಾಮ್ ಅವರಿಗೆ ವಿದ್ಯುತ್ ಕಂಬ ತಾಗಿ ಶಾಕ್ನಿಂದ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದವು. ಪರಿಣಾಮ ಎರಡೂ ಕೈಗಳನ್ನು ಕತ್ತರಿಸುವ ಅನಿವಾರ್ಯ ಎದುರಾಯಿತು. ಸದ್ಯ 10 ವರ್ಷಗಳ ಬಳಿಕ ಇದೀಗ ಎರಡೂ ಕೈಗಳನ್ನು ಕಸಿ ಮಾಡಿಸಿಕೊಂಡಿದ್ದಾರೆ. ಈ ರೀತಿ ಕಸಿ ಮಾಡಿಕೊಂಡ ಏಷ್ಯಾದ ಮೊದಲ ವ್ಯಕ್ತಿ ಪ್ರೇಮ್ರಾವ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರೇಮಾ ರಾವ್, ನನ್ನ ಎರಡೂ ಕೈಗಳನ್ನು ಕಳೆದುಕೊಂಡ ನಂತರ ನಾನು ತುಂಬಾ ನೊಂದುಕೊಂಡಿದ್ದೆ. ಇದೀಗ ನನಗೆ ಎರಡೂ ಕೈಗಳು ಬಂದಿದ್ದು, ಕುಟುಂಬ ಹಾಗೂ ವೈದ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.