ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿ 50 ದಿನ ಕಳೆದಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ 17 ಮಂದಿ ಸದ್ಯದ ಮಟ್ಟಿಗೆ ಹೊರ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಮಧ್ಯೆ ಪೊಲೀಸರು ಹಲವು ಮಹತ್ವದ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ಮಧ್ಯೆ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ದರ್ಶನ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಯೆಸ್. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ಆರೋಪಿ ದರ್ಶನ್ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗ್ತಿವೆ. ಈಗಾಗಲೇ ತನಿಖೆ ಹಂತವನ್ನ ಪೂರ್ಣಗೊಳಿಸೋ ನಿಟ್ಟಿನಲ್ಲಿ ಸಾಗ್ತಿರೋ ಪೊಲೀಸರ ಕೈಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಈಗ ಸಿಕ್ಕಿರೋ ಎವಿಡೆನ್ಸ್ ಕೇಸ್ನಲ್ಲಿ ದರ್ಶನ್ ಪಾತ್ರ ಇತ್ತು ಅನ್ನೋದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ಆರೋಪಿ ದರ್ಶನ್ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗ್ತಿವೆ. ಈಗಾಗಲೇ ತನಿಖೆ ಹಂತವನ್ನ ಪೂರ್ಣಗೊಳಿಸೋ ನಿಟ್ಟಿನಲ್ಲಿ ಸಾಗ್ತಿರೋ ಪೊಲೀಸರ ಕೈಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಈಗ ಸಿಕ್ಕಿರೋ ಎವಿಡೆನ್ಸ್ ಕೇಸ್ನಲ್ಲಿ ದರ್ಶನ್ ಪಾತ್ರ ಇತ್ತು ಅನ್ನೋದಕ್ಕೆ ಪುಷ್ಠಿ ಕೊಡುತ್ತಿದೆ.
ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಒಂದೊಂದು ಸಾಕ್ಷ್ಯಗಳು ಪೊಲೀಸರ ಕೈಸೇರ್ತಿವೆ. ಪ್ರಕರಣದಲ್ಲಿ ಸಿಸಿಟಿವಿ ದೃಶ್ಯ, ಪಟ್ಟಣಗೆರೆ ಶೆಡ್ನಲ್ಲಿ ಸಿಕ್ಕಿದ್ದ ಬ್ಲಡ್ ಸಾಂಪಲ್ಸ್, ಆರೋಪಿಗಳ ವಿರುದ್ಧ ಸಿಕ್ಕಿರೋ ಎವಿಡೆನ್ಸ್ ಸೇರಿದಂತೆ ಸುಮಾರು 200ಕ್ಕೂ ಅಧಿಕ ಸಾಕ್ಷ್ಯಗಳನ್ನ ಸಿದ್ಧಪಡಿಸಿದ್ದಾರೆ. ಇದರ ಬೆನ್ನಲ್ಲೇ ಕಳೆದೆರಡು ದಿನಗಳ ಹಿಂದೆ ಪೊಲೀಸರು ವಶಪಡಿಸಿಕೊಂಡಿದ್ದ ಆರೋಪಿ ದರ್ಶನ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಇರೋದು ಎಫ್ಎಲ್ಎಲ್ ವರದಿಯಲ್ಲಿ ಪತ್ತೆಯಾಗಿತ್ತು. ಒಗೆದು ಒಣ ಹಾಕಿದ್ದ ಬಟ್ಟೆಯಲ್ಲಿ ರಕ್ತದ ಕಲೆ ಹೇಗೆ ಸಿಕ್ತು ಅನ್ನೋ ಕುತೂಹಲಕ್ಕೆ ಕಾರಣವಾಗಿದ್ದು ಲುಮಿನಲ್ ಟೆಸ್ಟ್.
ರಕ್ತದ ಕಲೆಗಳನ್ನ ಪತ್ತೆ ಹಚ್ಚಲು ಇರುವ ಲುಮಿನಲ್ ಟೆಸ್ಟ್ ಇದಾಗಿದೆ. ಲಮಿನಲ್ ಎಂಬುದು ಒಂದು ರೀತಿಯ ಕೆಮಿಕಲ್. ರಕ್ತದ ಕಲೆ ಇರುವ ಬಟ್ಟೆಗೆ ಲುಮಿನಲ್ ಕೆಮಿಕಲ್ ಅಪ್ಲೈ ಮಾಡಲಾಗುತ್ತೆ. ಅದು ಹಿಮೋಗ್ಲೋಬಿನ್ ಜೊತೆ ವರ್ತಿಸಿ, ನಂತರ ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಉತ್ಪಾದನೆ ಮಾಡುತ್ತೆ. ನೀಲಿ-ಹಸಿರು ಬಣ್ಣದ ದ್ರಾವಣ ಸಂಗ್ರಹಿಸಿ ಅದರಿಂದ ಡಿಎನ್ಎ ಸಂಗ್ರಹಿಸಲಾಗುತ್ತೆ. ಹೀಗೆ ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ.