ಬೆಂಗಳೂರು: ಕಿಲ್ಲಂಗ್ ಸ್ಟಾರ್ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಲೆಯಾದ ಟೈಂ ನಲ್ಲಿ ದಾಸ ಪಟ್ಟಣಗೆರೆ ಶೆಡ್ ನಲ್ಲಿ ಇದ್ದ ಅನ್ನೋದಕ್ಕೆ ಪೂರಕವೆಂಬಂತೆ ಸಾಕ್ಷಿಗಳು ಸಿಕ್ಕಿವೆ. ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ರಿಟ್ರೀವ್ ಆಗಿರುವ ಪೋಟೊ ಗಳೇ ಸಾರಿ ಸಾರಿ ಹೇಳ್ತಿವೆ.ಇತ್ತ ಖಾಕಿ ಟೀಮ್ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಪೋಲೀಸರು ಇದಕ್ಕೆ ಪೂರಕವೆಂಬ ಗೃಹ ಸಚಿವರು ಕೂಡ ಸಾಥ್ ನೀಡಿದ್ದಾರೆ.
ಇನ್ನೇರೆಡು ದಿನ , ಕೇವಲ ಎರಡು ದಿನ ಅಷ್ಟೇ ದರ್ಶನ್ ಗೆ ಅಪರೇಷನ್ ಮಾಡಿಲ್ಲ ಅಂದ್ರೆ ಲಕ್ವ ಹೊಡೆಯುತ್ತೆ ಹಾಗಾಗಿ ಜಾಮೀನು ನೀಡಬೇಕೆಂದು ಮಧ್ಯಂತರ ಜಾಮೀನು ಪಡೆದಿದ್ದರು, ಆದ್ರೆ ಇದುವರೆಗೂ ಕೂಡ ಯಾವುದೇ ಅಪರೇಷನ್ ಮಾಡಿಸಿಕೊಂಡಿಲ್ಲ ಬದಲಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಇಷ್ಟು ದಿನ ಆದ್ರೂ ಕೂಡ ವೈದ್ಯರು ಯಾಕೆ ಅಪರೇಷನ್ ಗೆ ಕೈ ಹಾಕಿಲ್ಲ, ಡೇಟ್ ಫಿಕ್ಸ್ ಆಗಿಲ್ಲ ಇದನ್ನ ನೋಡಿದ್ರೆ ಅನುಮಾನ ಶುರುವಾಗುತ್ತೆ ಮಧ್ಯಂತರ ಜಾಮೀನು ರದ್ದು ಮಾಡಬೇಕೆಂದು ಮನವಿ ಸಲ್ಲಿಸುತ್ತೇವೆ ನ್ಯಾಯಾಲಯ ವ್ಯವಸ್ಥೆಯಲ್ಲಿ ತೀರ್ಮಾನ ಆಗಬೇಕು ಎಂದು ಹೋಮ್ ಮಿನಿಸ್ಟರ್ ಡಾ ಜಿ ಪರಮೇಶ್ವರ್ ಹೇಳಿಕೆ ಮತ್ತೆ ದರ್ಶನ್ ಗೆ ನಡುಕ ಶುರುವಾಗಿದೆ.
ರೇಣುಕಾಸ್ವಾಮಿ ಕೊಲೆಯಾದ ಸಮಯದಲ್ಲಿ ನಟ ದರ್ಶನ್ ಪಟ್ಟಣಗೆರೆ ಶೆಡ್ ನಲ್ಲಿದ್ದರು ಅನ್ನೋದಕ್ಕೆ ಸಾಕ್ಷಿಗಳು ಸಿಕ್ಕಿವೆ. ದರ್ಶನ್ ಜೊತೆಯಲ್ಲಿ ದ್ದವರು ವಿಡಿಯೋ ಮಾಡಿಕೊಂಡಿದ್ದರು, ಫೋಟೊ ಗಳನ್ನ ತೆಗೆದಿದ್ದರು ಅವರ ಮೊಬೈಲ್ ಗಳನ್ನ ಎಫದ ಎಸ್ ಎಲ್ ಗೆ ಹೈದರಾಬಾದ್ ಗೆ ಕಳುಹಿಸಲಾಗಿತ್ತು ಇದೀಗ ಪೋಟೊ ಗಳು ರಿರ್ಟಿವ್ ಆಗಿವೆ.
ಆರೋಪಿಗಳಾದ ರಾಘವೇಂದ್ರ, ಜಗದೀಶ್ ಜೊತೆ ಇರೋ ಇರೋ ಪೋಟೊಗಳನ್ನ ಸಾಕ್ಷಿಗಳನ್ನಾ ಗಿಟ್ಟುಕೊಂಡು ಮಧ್ಯಂತರ ಜಾಮೀನು ರದ್ದು ಮಾಡಬೇಕೆಂದು ನ್ಯಾಯಾಲಯಕ್ಕೆ ಸಾಕ್ಷಿಗಳನ್ನ ಮಾಡಲಾಗಿದ್ದು .ಈಗಾಗಲೇ 1300 ಪುಟಗಳ ಜಾರ್ಜ್ ಶೀಟ್ ನ್ನ ಸಲ್ಲಿಸಿಲಾಗಿದೆ. ಒಟ್ಟಾರೆ ಬೇಲ್ ಮೇಲೆ ಹೊರಗಡೆ ಬರಲು ನಟ ದರ್ಶನ್ ನ್ಯಾಯಾಲಯ ಕ್ಕೆ ಸುಳ್ಳು ವರದಿ ನೀಡಿದ್ರಾ..ಅನ್ನೋ ಅನುಮಾನ ಮೂಡುತ್ತಿದ್ದು.ಆದಷ್ಟು ಬೇಗ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಪೊಲೀಸ್ ಸಿದ್ದತೆ ಆಗಿದ್ದು .ಇದರಲ್ಲಿ ಯಾರಿಗೆ ಜಯ ಸಿಗುತ್ತೆ ಅಂತ ಕಾದು ನೋಡಬೇಕು