ದಿನಕ್ಕೊಂದರಂತೆ ಹೊಸ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಜನರು ಜೀವ ಉಳಿಸಕೊಳ್ಳಲು ಹೆಣಗಾಡುತ್ತಿದ್ದಾರೆ. ಸದ್ಯ ಮಿದುಳು ತಿನ್ನುವ ಅಮೀಬಾ ರೋಗವನ್ನು ಸಾಕಷ್ಟು ಕಡೆ ಕಾಣಿಸಿಕೊಂಡಿದ್ದು ಇದರಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಈ ಸೋಂಕಿಗೆ ಪಾಕಿಸ್ತಾನದ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಆತಂಕ ಮೂಡಿಸಿದೆ. ಪಾಕಿಸ್ತಾನದಲ್ಲಿ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ.
ಮೃತನನ್ನು ಔರಂಗಜೇಬ್ ಎಂದು ಗುರುತಿಸಲಾಗಿದೆ. ಜು.7 ರಂದು ಕ್ವೈದಾಬಾದ್ನ ಫಾರ್ಮ್ಹೌಸ್ನಲ್ಲಿ ಸ್ನೇಹಿತರೊಂದಿಗೆ ಪಿಕ್ನಿಕ್ ಹೋಗಿದ್ದ ಔರಂಗಜೇಬ್ ಈ ವೇಳೆ ಸ್ವಿಮ್ಮಿಂಗ್ ಕೂಡ ಮಾಡಿದ್ದರು. ಅದಾದ ಬಳಿಕ ಸೋಂಕಿಗೆ ತುತ್ತಾಗಿದ್ದಾರೆ. ಔರಂಗಜೇಬ್ಗೆ ಮೊದಲು ವಾಕರಿಕೆ ಮತ್ತು ಜ್ವರ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜು.10 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಜುಲೈ 11 ರಂದು ವೈರಸ್ ದೃಢಪಟ್ಟಿತು. ಚಿಕಿತ್ಸೆ ಫಲಿಸದೇ ಸೋಂಕಿಗೆ ಬಲಿಯಾಗಿದ್ದಾರೆ. ಇತರೆ ಎರಡು ಸಾವು ಪ್ರಕರಣಗಳು ಈ ಹಿಂದೆ ಕೋರಂಗಿ ಮತ್ತು ಮಲಿರ್ನಲ್ಲಿ ವರದಿಯಾಗಿದ್ದವು.
ಮುಕ್ತ ಜೀವಂತ ಅಮೀಬಾ ಹೊಂದಿರುವ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಅದು ಜನರಿಗೆ ಸೋಂಕು ತರುತ್ತದೆ. ಈಜುಕೊಳ, ನದಿ, ಸರೋವರಗಳಲ್ಲಿ ಈಜುವಾಗ ಸೋಂಕು ಉಂಟಾಗಬಹುದು. ಅಮೀಬಾ ಮೂಗಿನ ಮೆದುಳಿಗೆ ತಲುಪುತ್ತದೆ. ಅಲ್ಲಿ ಅದು ಮೆದುಳಿನ ಅಂಗಾಂಶವನ್ನು ಹಾನಿಗೊಳಿಸುತ್ತದೆ.