ಬೆಂಗಳೂರು : BJP ಯ ಮತ್ತೊಂದು ವಿಕೇಟ್ ಪತನವಾಗಿದೆ. ಬಿಜೆಪಿ MLC ಪುಟ್ಟಣ್ಣ, ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಪುಟ್ಟಣ್ಣ, ಕಾಂಗ್ರೆಸ್ ಸೇರ್ಪಡೆಯಾದ್ರು.
ಪುಟ್ಟಣ್ಣ ರಾಜಾಜಿನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಗ ಕಾಂಗ್ರೆಸ್ ಸೇರ್ಪಡೆ ಆಗಿರೋದ್ರಿಂದ ಪುಟ್ಟಣ್ಣಗೆ ಬಹುತೇಕ ರಾಜಾಜಿನಗರ ಟಿಕೆಟ್ ನೀಡಬಹುದು ಎನ್ನಲಾಗಿದೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಕ್ಕೆ ಬಂದಿರೋದ್ರಿಂದ, ಪುಟ್ಟಣ್ಣಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಬಹುದ ಎಂಬ ಚರ್ಚೆ ನಡೀತಿದೆ.
ಪುಟ್ಟಣ್ಣ ಸೇರ್ಪಡೆ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪುಟ್ಟಣ್ಣ. ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. 4 ಬಾರಿ ಪರಿಷತ್ ಸದಸ್ಯರಾಗಿದ್ರು. ಬಿಜೆಪಿ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಏನೂ ಕೊಡುಗೆ ಕೊಡಲು ಆಗಲಿಲ್ಲ. ಹೀಗಾಗಿ, ಕಾಂಗ್ರೆಸ್ ಸೇರಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ರು.