ಮಾಲ್ಡೀವ್ಸ್ ಸರ್ಕಾರದ “ಭಾರತ ವಿರೋಧಿ ನಿಲುವು” ದ್ವೀಪ ರಾಷ್ಟ್ರದ ಅಭಿವೃದ್ಧಿಗೆ ಹಾನಿಕಾರಕವಾಗ ಬಹುದು ಎಂದು ಎರಡು ಪ್ರಮುಖ ವಿರೋಧ ಪಕ್ಷಗಳು ಎಚ್ಚರಿಸಿವೆ. ಚೀನಾದ ಹಡಗಿಗೆ ತಮ್ಮ ದೇಶದ ಜಲ ಪ್ರದೇಶಗಳಲ್ಲಿ ತಂಗಲು ಅವಕಾಶ ಕೊಟ್ಟಿದ್ದಕ್ಕೂ ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಮಾಲ್ಡೀವ್ಸ್ – ಭಾರತ 2 ನೆರೆಹೊರೆಯ ದೇಶಗಳಾಗಿದ್ದು, ಇವರಿಬ್ಬರ ನಡುವಿನ ಸಂಬಂಧಗಳು ಹಳಸುತ್ತಿದೆ. ಹಾಗೂ, ಚೀನಾದ ಕಡೆಗೆ ಮಾಲ್ಡೀವ್ಸ್ನ ಬಾಂಧವ್ಯ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಂಭಾವ್ಯ ಮಹತ್ವದ ಭೌಗೋಳಿಕ ರಾಜಕೀಯ ಮತ್ತು ಮಿಲಿಟರಿ ಬದಲಾವಣೆಯ ನಡುವೆ 2 ವಿರೋಧ ಪಕ್ಷಗಳು ಮಾಲ್ಡೀವ್ಸ್ ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿವೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು 2023 ರ ಚುನಾವಣೆಯನ್ನು ಭಾರತ ವಿರೋಧಿ ಹಾಗೂ ಮೋದಿ ವಿರೋಧಿ ನಿರೂಪಣೆಯ ಮೇಲೆ ಗೆದ್ದಿದ್ದಾರೆ. ಆದರೆ, ಇತರೆ ಪಕ್ಷಗಳು ಭಾರತದ ಪರ ನೀತಿಯನ್ನು ಅನುಸರಿಸುತ್ತಿದ್ದರು. ಮತ್ತು ಡೆಮೋಕ್ರಾಟ್ ಎರಡೂ ಪಕ್ಷಗಳು ಯಾವುದೇ ಅಭಿವೃದ್ಧಿ ಪಾಲುದಾರರನ್ನು ದೂರವಿಡುವುದು,
ಮತ್ತು ವಿಶೇಷವಾಗಿ ದೇಶದ ದೀರ್ಘಾವಧಿಯ ಮಿತ್ರ ರಾಷ್ಟ್ರದ ದೀರ್ಘಾವಧಿಯ ಅಭಿವೃದ್ಧಿಗೆ ಅತ್ಯಂತ ಹಾನಿಕಾರಕ ಎಂದು ಹೇಳಿಕೆ ನೀಡಿವೆ. ಹಾಗೂ, ವಿದೇಶಿ ನೀತಿಯಲ್ಲಿನ ನಿರ್ದೇಶನ ಕುರಿತು ಅವರ ಮೌಲ್ಯಮಾಪನವು ಮಾಲ್ಡೀವ್ಸ್ ಸರ್ಕಾರವು ಸಾಂಪ್ರದಾಯಿಕವಾಗಿ ಮಾಡಿದಂತೆ ಎಲ್ಲಾ ಅಭಿವೃದ್ಧಿ ಪಾಲುದಾರರೊಂದಿಗೆ ಕೆಲಸ ಮಾಡಬೇಕು ಎಂದೂ ಹೇಳಿದೆ.
ಹಿಂದೂ ಮಹಾಸಾಗರದಲ್ಲಿ ಸ್ಥಿರತೆ ಮತ್ತು ಭದ್ರತೆಯು ಮಾಲ್ಡೀವ್ಸ್ನ ಸ್ಥಿರತೆ ಮತ್ತು ಭದ್ರತೆಗೆ ಅತ್ಯಗತ್ಯ ಎಂದು 87 ಸದಸ್ಯರ ಸದನದಲ್ಲಿ ಜಂಟಿಯಾಗಿ 55 ಸ್ಥಾನಗಳನ್ನು ಹೊಂದಿರುವ ಎರಡು ವಿರೋಧ ಪಕ್ಷಗಳು ಹೇಳಿವೆ. ಎಂಡಿಪಿಯ ಅಧ್ಯಕ್ಷ ಫಯಾಜ್ ಇಸ್ಮಾಯಿಲ್, ಸಂಸತ್ತಿನ ಉಪ ಸ್ಪೀಕರ್ ಅಹ್ಮದ್ ಸಲೀಂ, ಡೆಮಾಕ್ರಟ್ ಪಕ್ಷದ ಮುಖ್ಯಸ್ಥ ಎಂಪಿ ಹಸನ್ ಲತೀಫ್ ಮತ್ತು ಸಂಸದೀಯ ಗುಂಪಿನ ನಾಯಕ ಅಲಿ ಅಜೀಂ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.