ಅನುಪಮಾ ಪರಮೇಶ್ವರ್ ನಟನೆಯ ‘ಟಿಲ್ಲು ಸ್ಕ್ವೇರ್’ ಚಿತ್ರ ಸಖತ್ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ನಟಿ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಹಿಂದೆಂದೂ ಕಾಣದಷ್ಟು ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಹಾಗೂ ಕಿಸ್ಸಿಂಗ್ ದೃಶ್ಯಗಳಿದ್ದು ಇದೇ ಕಾರಣಕ್ಕೆ ಚಿತ್ರ ಮತ್ತಷ್ಟು ಸುದ್ದಿಯಾಗಿದೆ. ಇದೀಗ ಚಿತ್ರತಂಡ ಅಭಿಮಾನಿಗಳ ಜೊತೆ ಚಿತ್ರದ ಕುರಿತು ಚರ್ಚೆ ನಡೆಸಿದೆ.
ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ಅನುಪಮಾಗೆ ಜೋಡಿಯಾಗಿ ನಟ ಸಿದ್ದು ಜೊನ್ನಲಗಡ್ಡ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಅವರು ‘ಡಿಜೆ ಟಿಲ್ಲು’ಗೆ ಸೀಕ್ವೆಲ್ ಮಾಡಬಹುದು ಎಂದು ಹೇಳಿದ್ದರು. ಈ ಪ್ಲ್ಯಾನ್ ನಿರ್ಮಾಪಕರಿಗೂ ಇಷ್ಟ ಆಗಿತ್ತು. ಮೊದಲು ‘ಟಿಲ್ಲು ರಿಟರ್ನ್’, ‘ಟಿಲ್ಲು 2’ ಎಂದೆಲ್ಲ ಟೈಟಲ್ ಇಡಲಾಗಿತ್ತು. ತ್ರಿವಿಕ್ರಮ್ ಅವರು ‘ಟಿಲ್ಲು ಸ್ಕ್ವೇರ್’ ಟೈಟಲ್ ಫಿಕ್ಸ್ ಮಾಡಿದ್ದರು ಎಂದು ಚಿತ್ರತಂಡ ಹೇಳಿದೆ.
ಕಿಸ್ಸಿಂಗ್ ದೃಶ್ಯಗಳು ಇದ್ದರೆ ಇಡೀ ಕುಟುಂಬದವರು ಹೋಗಿ ಸಿನಿಮಾ ನೋಡಲು ಮುಜುಗರ ಆಗುತ್ತದೆ. ಈ ಕಾರಣಕ್ಕೆ ಇದು ಫ್ಯಾಮಿಲಿ ಸಿನಿಮಾ ಆಗಲು ಸಾಧ್ಯವೇ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ನಟ ಸಿದ್ದು ಜೊನ್ನಲಗಡ್ಡ ಸ್ಪಷ್ಟನೆ ನೀಡಿದ್ದು, ‘ಈ ಚಿತ್ರದಲ್ಲಿ ಯಾವುದೇ ಅಡಲ್ಟ್ ಕಂಟೆಂಟ್ ಇಲ್ಲ’ ಎಂದಿದ್ದಾರೆ.
‘ಡಿಜೆ ಟಿಲ್ಲು ಚಿತ್ರವನ್ನು ಜನರು ನೋಡಿ ಇಷ್ಟಪಟ್ಟಿದ್ದಾರೆ. ಟಿಲ್ಲು ಸ್ಕ್ವೇರ್ ಕೂಡ ಜನರಿಗೆ ಇಷ್ಟ ಆಗಲಿದೆ’ ಎಂದು ನಿರ್ಮಾಪಕ ನಾಗ ವಂಶಿ ಹೇಳಿದ್ದಾರೆ.
ಅನುಪಮಾ ಪರಮೇಶ್ವರನ್ ಹಾಗೂ ಸಿದ್ದು ಅವರ ಕೆಮಿಸ್ಟ್ರಿಯನ್ನು ಜನರು ಇಷ್ಟಪಟ್ಟಿದ್ದಾರೆ. ಅವರು ಪ್ಯಾಷನೇಟ್ ಆಗಿ ಕಿಸ್ ಮಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದಕ್ಕೆ ಅವರು ಖುಷಿಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನುಪಮಾ ಹಾಟ್ ದೃಶ್ಯದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ಇದುವರೆಗೂ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ನಟಿಯನ್ನು ಇದೀಗ ಹಾಟ್ ಅವತಾರದಲ್ಲಿ ಜನ ಸ್ವೀಕರಿಸುತ್ತಾರಾ ಕಾದು ನೋಡಬೇಕಿದೆ.