ಟಾಲಿವುಡ್ ಬ್ಯೂಟಿ, ಬಾಹುಬಲಿ ಚಿತ್ರದ ನಟಿ ಅನುಷ್ಕಾ ಶೆಟ್ಟಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡಿದರು ಈಕೆಗಿರೋ ಫ್ಯಾನ್ ಕ್ರೇಜ್ ಮಾತ್ರ ಕೊಂಚವು ಕಮ್ಮಿ ಇಲ್ಲ. ಇದೀಗ ಸ್ವೀಟಿ ಬಗ್ಗೆ ಇಂಟ್ರಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ಅನುಷ್ಕಾ ನಗುವಿನ ಕಾಯಿಲೆಯಿಂದ ಬಳಲುತ್ತಿರುವುದಾಗಿ ಅನುಷ್ಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ನಗುವಿನ ಕಾಯಿಲೆ ಅದೇನು ದೊಡ್ಡ ಸಮಸ್ಯೆಯಲ್ಲ. ಆದರೆ ಅನೇಕ ಸಲ ಅದರಿಂದ ಮುಜುಗರಕ್ಕೆ ಒಳಗಾಗಿದ್ದು ಇದೆ. ಅನುಷ್ಕಾ ಒಮ್ಮೆ ನಗಲು ಶುರು ಮಾಡಿದರೆ ನಿಲ್ಲಿಸಲು ಬಹಳ ಸಮಯ ತೆಗೆದುಕೊಳ್ತಾರಂತೆ. ಇದರಿಂದ ಶೂಟಿಂಗ್ ವೇಳೆ ಮುಜುಗರ ಎದುರಿಸಿದ್ದು ಇದೆ ಎಂದು ನಟಿ ಹೇಳಿದ್ದಾರೆ.
ಒಮ್ಮೊಮ್ಮೆ ನೆಲದ ಮೇಲೆ ಬಿದ್ದು ಸಹ ನಗುವುದಿದೆಯಂತೆ. ಇದರಿಂದ ಶೂಟಿಂಗ್ ನಿಲ್ಲಿಸಲಾಗಿದೆಯಂತೆ. ಯಾವುದಾದರೂ ಕಾಮಿಡಿ ಸೀನ್ ಚಿತ್ರೀಕರಣ ಮಾಡಬೇಕಾದರೆ ಕೆಲವೊಮ್ಮೆ ನಗು ಬಂದು ಬಿಡುತ್ತಿತ್ತಂತೆ. 15-20 ನಿಮಿಷಗಳ ಕಾಲ ನಗು ಕಂಟ್ರೋಲ್ಗೆ ಬರುತ್ತಿರಲಿಲ್ಲವಂತೆ. ಆ ನಂತರ ಅನುಷ್ಕಾರ ಈ ಸಮಸ್ಯೆ ತಮ್ಮ ಅನುಕೂಲಕ್ಕೂ ಚಿತ್ರತಂಡ ಬಳಸಿಕೊಂಡಿದ್ದು ಇದೆ. ಅವರಿಗೆ ಬ್ರೇಕ್ ಬೇಕಾದಾಗ ನಗಿಸಿ ಬಿಡುತ್ತಿದ್ದರಂತೆ. ಆ ನಂತರ ಸಿನಿಮಾ ಶೂಟಿಂಗ್ ಶುರು ಮಾಡುತ್ತಿದ್ದರು ಎಂದು ಬಾಹುಬಲಿ ನಟಿ ಹೇಳಿದ್ದಾರೆ.
ಕಳೆದ ವರ್ಷ ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಇದೀಗ ತೆಲುಗಿನ ‘ಘಾಟಿ’ ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ. ಜೊತೆಗೆ ಮಾಲಿವುಡ್ನಲ್ಲಿ ‘ಕಥನಾರ್’ ಸಿನಿಮಾದಲ್ಲಿಯೂ ಕಾಣಿಸಿಕೊಳ್ತಿದ್ದಾರೆ.