ಸದಾ ಹಸನ್ಮುಖಿಯಾಗಿರುತ್ತಿದೆ, ನೋವಿನ ನಡುವೆಯೇ ಕೋಟ್ಯಾಂತರ ಹೃದಯಗಳನ್ನು ನಕ್ಕು ನಗಿಸುತ್ತಿದ್ದ ಖ್ಯಾತ ನಿರೂಪಕಿ ಅಪರ್ಣಾ ಅವರು ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ತಮ್ಮ ನಿರೂಪಣಾ ಶೈಲಿಯಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಅಪರ್ಣಾ 1984ರಲ್ಲಿ ಬಿಡುಗಡೆಯಾದ ಮಸಣದ ಹೂವು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಕನ್ನಡದ ನಿರೂಪಕಿಯಾಗಿ ಛಾಪೂ ಮೂಡಿಸಿದರು. ನಿರೂಪಣೆಯ ಜೊತೆಗೆ ನಟಿಯಾಗಿಯೂ ಸೈ ಎನಿಸಿಕೊಂಡಿದ್ದರು.
ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ಅಪರ್ಣಾ ಅವರಿಗೆ ಕ್ಯಾನ್ಸರ್ ಇದೆ ಅನ್ನೋ ಕಹಿ ಸತ್ಯ ಸಾಕಷ್ಟು ಮಂದಿಗೆ ಗೊತ್ತೆ ಇರಲಿಲ್ಲ. ಇದರ ಸುಳಿವನ್ನು ಎಂದು ಬಿಟ್ಟುಕೊಟ್ಟಿರಲಿಲ್ಲ. ಅಪರ್ಣಾ ಅವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಇವರಿಗೆ ಒಂದು ನಿರೂಪಣೆ ಶಾಲೆ ತೆರೆಯಬೇಕೆಂಬ ಆಸೆ ಇತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಬಿಟ್ಟು ಅಪರ್ಣಾ ಅವರು ಇಹಲೋಕ ತ್ಯಜಿಸಿದ್ದಾರೆ. ಆದರೆ ಅಪರ್ಣಾ ಅವರಿಗೆ ಕ್ಯಾನ್ಸರ್ ಬಂದಿರೋ ವಿಚಾರ ತಿಳಿದಿದ್ರು ನಿರೂಪಣೆ ಶಾಲೆ ತೆರೆಯಬೇಕು ಎಂದ ಆಸೆ ಇದ್ದೇ ಇತ್ತಂತೆ. ಆದರೆ ಕೊನೆಗೂ ಆ ಆಸೆ ಕೈಗೂಡದೇ ಹೋಗಿದೆ.
ನಿರೂಪಣೆ ಶಾಲೆ ತೆರೆಯಬೇಕು ಎಂಬ ಆಸೆಯನ್ನು ಅಪರ್ಣಾ ಪದೇ ಪದೇ ವ್ಯಕ್ತಪಡಿಸುತ್ತಿದ್ದಾರೆಂತೆ. ಕ್ಯಾನ್ಸರ್ ಇದೆ ಎಂದು ಗೊತ್ತಾದಾಗಲು ಈ ಆಸೆ ಅಪರ್ಣಾರಿಂದ ಹೋಗಿರಲಿಲ್ಲ. ಆದರೆ ತಮ್ಮ ಆಸೆ ಕೈಗೂಡುವ ಮುನ್ನವೇ ಅಪರ್ಣಾ ನಮ್ಮೆಲ್ಲರನ್ನು ಅಗಲಿ ಮತ್ತೆಂದು ಬಾರದ ಲೋಕಕ್ಕೆ ಹೋಗಿ ಬಿಟ್ಟಿದ್ದಾರೆ.
ಇನ್ನೂ ಅಪರ್ಣಾ 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಹಾಗೇ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ‘ಮಜಾ ಟಾಕೀಸ್’ನಲ್ಲಿ ನಟಿಸಿ, ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಇದರಲ್ಲಿ ವರಲಕ್ಷ್ಮಿ ಪಾತ್ರದಲ್ಲಿ ಮಿಂಚಿದ್ದರು. ಇವರು ಧ್ವನಿಯನ್ನು ಬಸ್ ನಿಲ್ಧಾಣ ಹಾಗೂ ಮೆಟ್ರೋ ಆರಂಭದ ದಿನಗಳಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ಬಳಸಿಕೊಳ್ಳಲಾಗಿತ್ತು.