ಖ್ಯಾತ ಕನ್ನಡ ನಿರೂಪಕಿ ಅಪರ್ಣಾ ಸಾವು ಕನ್ನಡಿಗರಿಗೆ ಶಾಕ್ ನೀಡಿದೆ. ಅಪರ್ಣಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಏಕಾಏಕಿ ಅಪರ್ಣಾ ಮೃತಪಟ್ಟಿದ್ದಾರೆ ಎಂಬ ಸುದ್ದಿ ಪ್ರತಿಯೊಬ್ಬರಿಗೂ ಶಾಕ್ ನೀಡಿದೆ.
ಅಪರ್ಣಾ ತಮ್ಮ ಬನಶಂಕರಿ ನಿವಾಸದಲ್ಲಿ ನಿನ್ನೆ ಸಂಜೆ ಕೊನೆಯಿಸಿರೆಳೆದಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ ಕಳೆದ ಕೆಲ ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಏಕಾಏಕಿ ಆಕೆಯ ಸಾವು ಬರಸಿಡಿಲು ಬಡಿದಂತಾಗಿದೆ.
ಇನ್ನೂ ಪ್ರೀತಿಯ ಮಡದಿ ಸಾವಿನ ಬಗ್ಗೆ ಅಪರ್ಣಾ ಪತಿ ನಾಗರಾಜ್ ವಸ್ತಾರೆ ಮಾಹಿತಿ ನೀಡಿದ್ದಾರೆ. ಅಪರ್ಣಾ ಇನ್ನಿಲ್ಲ ಅನ್ನೋ ವಿಚಾರವನ್ನು ಬಹಳ ನೋವಿನಿಂದಲೇ ಹಂಚಿಕೊಂಡಿದ್ದಾರೆ.
ನನ್ನ ಪ್ರೀತಿಯ ಮಡದಿ ಅರ್ಪಣಾ ಇಹ ಲೋಕ ತ್ಯಜಿಸಿದ್ದಾರೆ. ಕಳೆದ ಎರಡು ವರುಷದಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಾಲ್ಕನೇ ಸ್ಟೇಜ್ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ನಾವು ಸೋತಿದ್ದೇವೆ ಎಂದು ಅಗಲಿದ ಪತ್ನಿಯನ್ನು ನೆನೆದು ನಾಗರಾಜ್ ವಸ್ತಾರೆ ಕಣ್ಣೀರಿಟ್ಟಿದ್ದಾರೆ.
ಹಲವು ದಶಕಗಳ ಕಾಲ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದಲ್ಲೆ ಅಪರ್ಣಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. 1984 ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದರು. ನಂತರ ಇನ್ಸ್ಪೆಕ್ಟರ್ ವಿಕ್ರಮ್ ಮೊದಲಾದ ಚಿತ್ರಗಳಲ್ಲಿ ನಟಿಸಿದರು.