ಬೆಂಗಳೂರು: ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ಹಣಕಾಸು ಸಚಿವೆಯನ್ನ ಭೇಟಿ ಮಾಡಿ, ಮನವಿ ಮಾಡಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಳಿ ರೈತರ ವಿಚಾರದಲ್ಲಿ ಅಂಕಿ ಅಂಶಗಳು ತಪ್ಪಾಗಿದೆ. ನಮ್ಮ ಬಳಿಯಿರುವ ಮಾಹಿತಿ ಅನ್ವಯ ರಾಜ್ಯದಲ್ಲಿ ಅತೀ ಸಣ್ಣ ರೈತರು ಶೇಕಡಾ 70ರಷ್ಟಿದ್ದಾರೆ. ಹೀಗಾಗಿ 2015ರ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದರು.
ಒಂದು ವೇಳೆ 2015ರ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ 1500 ಕೋಟಿ ರಾಜ್ಯಕ್ಕೆ ನಷ್ಟ ಆಗುತ್ತೆ ಎಂದು ತಿಳಿಸಿದ್ರು. ಇನ್ನು, ರಾಜ್ಯದ ರೈತರು ಕಂಗಾಲಾಗಿ, ಸಂಕಷ್ಟ ಎದುರಿಸ್ತಿದ್ದಾರೆ. ಹೀಗಾಗಿ ಪರಿಹಾರ ಹಣ ನೇರವಾಗಿ ರೈತರ ಅಕೌಂಟಿಗೆ ಹಾಕಲು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದ್ದಾರೆ.
SHARE.