ಶಿವಮೊಗ್ಗ : ಶಿವಮೊಗ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಡಿಪ್ಲೊಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ 4 ವರ್ಷದ ಕೋರ್ಸ್ ಸೇರಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಎಸ್.ಎಸ್.ಎಲ್.ಸಿ ಪಾಸಾಗಿರುವ ಆಸಕ್ತರು ತಮ್ಮ ವಯಸ್ಸು, ವಿದ್ಯಾರ್ಹತೆ ದಾಖಲಾತಿ ಹಾಗೂ ವೈಯುಕ್ತಿಕ ವಿವರಗಳೊಂದಿಗೆ ಮೇ-31 ರೊಳಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ಸಿಎ-38, ನಿಧಿಗೆ, ಕೆ.ಐ.ಡಿ.ಬಿ.
ಕೈಗಾರಿಕಾ ಪ್ರದೇಶ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವಂತೆ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕೇಂದ್ರದ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 9902232839/ 9448307027/ 9880141054/ 9449286543/ 8904492741/ 9945561526 ಗಳನ್ನು ಸಂಪರ್ಕಿಸುವುದು.