ಬೆಂಗಳೂರು ;ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಹೀಗಾಗಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕರಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಆದರೆ ಹಲವೆಡೆ ವೆಬ್ ಸೈಟ್ ಓಪನ್ ಆಗದ ಹಿನ್ನೆಲೆ ಜನತೆ ಬೇಸರದಿಂದ ವಾಪಸ್ ತೆರಳುತ್ತಿರುವ ದೃಶ್ಯ ಸೆರೆಯಾಗಿದೆ.
ನೆಲಮಂಗಲ ನಗರದ ಬೆಸ್ಕಾಂ ಕಚೇರಿ ಬಳಿ ಮೂರು ನೊಂದಣಿ ಕೇಂದ್ರಕ್ಕೆ ಬಂದ ಜನತೆ, ವೆಬ್ ಸೈಟ್ ಒಪನ್ ಆಗದ ಹಿನ್ನೆಲೆ ವಾಪಸ್ ತೆರಳುತ್ತಿದ್ದಾರೆ. ಇಂದಿನಿಂದ 200 ಯೂನಿಟ್ ವಿದ್ಯುತ್ ಉಚಿತಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಗೃಹಜ್ಯೋತಿ ಯೋಜನೆಗೆ ಮೊದಲ ದಿನವೇ ತಾಂತ್ರಿಕ ಸಮಸ್ಯೆಯಿಂದ ಜನರು ಬೇಸರ ಹೊರ ಹಾಕಿದ್ದಾರೆ. ಒಬ್ಬೊಬ್ಬರಾಗಿ ನೋಂದಣಿ ಕೇಂದ್ರಕ್ಕೆ ಬಂದು ವಾಪಸ್ ಆಗುತ್ತಿದ್ದಾರೆ.