ಬೆಂಗಳೂರು;- ಸದಾ ಒಂದಲ್ಲೊಂದು ವಿನೂತನ ಪ್ರತಿಭಟನೆಗಳ ಮೂಲಕ ಹೆಸರುವಾಸಿಯಾಗಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹುಲಿ ಉಗುರಿಗೆ ಸಂಬಂಧಿಸಿದ ವಿಚಾರವಾಗಿ ಹುಲಿ ಚರ್ಮದ ರೀತಿಯ ಬಟ್ಟೆಯನ್ನು ಒದ್ದು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್ ವನ್ಯಜೀವಿಗಳ ರಕ್ಷಣೆ ಕಾಯ್ದೆ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಬಡವರಿಗೆ ಒಂದು ರೀತಿಯ ನ್ಯಾಯ ಬಲಾಡ್ಯರಿಗೆ ಮತ್ತೊಂದು ರೀತಿಯ ನ್ಯಾಯ ಸ್ವಲ್ಲದು…
ಪ್ರಧಾನ ಮಂತ್ರಿ ತಪ್ಪು ಮಾಡಿದ್ರು ಕೂಡ ತನಿಖೆ ಮಾಡಬೇಕು ಯಾರೋ ಒಬ್ಬನನ್ನು ಜೈಲಿಗೆ ಹಾಕಿದ ಕೂಡಲೇ ನ್ಯಾಯ ಒದಗಿಸಿದಂತೆ ಆಗುವುದಿಲ್ಲ ನಿರಂತರವಾಗಿ ವನ್ಯಜೀವಿಗಳ ಮೇಲೆ ದಾಳಿ ನಡೆಯುತ್ತಿದೆ ಅದನ್ನು ತಡೆಯೋದ್ರಲ್ಲಿ ಅರಣ್ಯ ಅಧಿಕಾರಿಗಳು ವಿಫಲವಾಗಿದ್ದಾರೆ ಕರ್ನಾಟಕದಲ್ಲಿ ಹಲವು ಅರಣ್ಯ ಪ್ರದೇಶಗಳಿದ್ದು ನಾಗರಹೊಳೆ ಬಂಡಿಪುರ ಮಲೆ ಮಾದೇಶ್ವರ ಬೆಟ್ಟ ಸೇರಿದಂತೆ ಹಲವು ಜಾಗಗಳಲ್ಲಿ ಅರಣ್ಯ ಹೊತ್ತುವರಿಯನ್ನು ಮಾಡಿದ್ದಾರೆ ಸಮರ್ಪಕವಾದ ನಿರ್ವಹಣೆ ಇಲ್ಲದ ಕಾರಣ ಕಾಡು ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ ಇಂತಹ ಪ್ರಕರಣಗಳಲ್ಲಿ ಅರಣ್ಯ ಅಧಿಕಾರಿಗಳು ತೋರಿದ ಅಸಡ್ಡೆಯೇ ಈ ಎಲ್ಲಾ ಚಟುವಟಿಕೆಗೆ ನೇರ ಕಾರಣ.
ಹೋಟೆಲ್ ಗಳು ರೆಸಾರ್ಟ್ ಗಳು ಹೆಗ್ಗಿಲ್ಲದೆ ಪ್ರಾರಂಭವಾಗುತ್ತಿರುವುದೇ ಕಾಡು ಪ್ರಾಣಿಗಳು ನಗರದತ್ತ ಮುಖ ಮಾಡಲು ನೇರ ಕಾರಣ ನಮ್ಮಲ್ಲಿರುವ ಅರಣ್ಯ ಪ್ರದೇಶಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೆ ಮಧ್ಯಪ್ರದೇಶದಿಂದ 9 ಚೀತಗಳನ್ನು ತಂದು ಸಾಧನೆ ಎಂಬಂತೆ ಬಿಂಬಿಸುತ್ತಿರುವುದು ವಿಪರ್ಯಾಸ ಅವುಗಳಲ್ಲಿ ಆರು ಚೀತಾಗಳು ಸಾವನ್ನಪ್ಪಿರುವುದು ದುಃಖದ ಸಂಗತಿ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಿ ಶೋಕಿಗೆಂದು ಹುಲಿ ಉಗುರನ್ನು ಬಳಸುವ ಇಂಥವರನ್ನು ಶಿಕ್ಷಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು