ಹುಬ್ಬಳ್ಳಿ: ಒಂದೇ ದಿನದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇ ಹೊರಡಿಸಿದೆ. ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಗೆ ನೂತನ ಆಯುಕ್ತರನ್ನಾಗಿ ಈಶ್ವರ ಉಳ್ಳಾಗಡ್ಡಿ ನೇಮಕ ಮಾಡಿದ್ದು, ಪಾಲಿಕೆ ಆಯುಕ್ತರಾಗಿದ್ದ ಡಾ.ಬಿ.ಗೋಪಾಲಕೃಷ್ಣ ಅವರು ವರ್ಗಾವಣೆಯಾಗಿದ್ದರು.
ಖಾಲಿಯಾದ ಸ್ಥಾನಕ್ಕೆ ಭರತ್ ಎಸ್ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಭರತ್ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮತ್ತೇ ಪಾಲಿಕೆ ಆಯುಕ್ತರ ಬದಲಾವಣೆ ಮಾಡಿದ ಸರ್ಕಾರ ಈಶ್ವರ ಉಳ್ಳಾಗಡ್ಡಿ ನೇಮಕ ಮಾಡಿದೆ.