ಕೊಪ್ಪಳ ಮನುಷ್ಯ ಮನುಷ್ಯನಿಗೆ ರಕ್ತ ಮನುಷ್ಯನಿಗೆ ರಕ್ತದಾನ ಮಾಡುವುದು ಸಾಮಾನ್ಯ ಸಂಗತಿ ಅದರಲ್ಲೂ ರಕ್ತದಾನ ಮಹಾದಾನ ಎಂದೇ ಹೇಳಲಾಗುತ್ತದೆ. ಇದನ್ನು ಮೀರಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ನಾಯಿ ಒಂದು ಇನ್ನೊಂದು ನಾಯಿ ಪ್ರಾಣವನ್ನು ಉಳಿಸುವುದಕ್ಕಾಗಿ ರಕ್ತದಾನ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಅನಾರೋಗ್ಯದಿಂದ ಹಿಮೋಗ್ಲೊಬಿನ್ ಶಕ್ತಿ ಮೂರಕ್ಕೆ ತಲುಪಿದ್ದ ನಗರದ ಒಂಭತ್ತು ವಷ೯ದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅತ್ಯವಶ್ಯಕತೆ ಇತ್ತು. ಇದನ್ನು ಅರಿತ ವೈದ್ಯರುಗಳು ನಗರದ ಮೂರು ನಾಯಿಗಳ ವಿಳಾಸಗಳನ್ನು ಸಂಪಕಿ೯ಸಿ ಕರೆಸಿ ಅವುಗಳ ರಕ್ತದ ಶಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಿದರು.
ನಗರದ ನಿವಾಸಿ ಪ್ರಾಧ್ಯಾಪಕ ಬಸವರಾಜ ಪೂಜಾರ್ ರವರ ಸಾಕು ನಾಯಿ ಮೂರು ವಷ೯ದ ಭೈರವ(ಡಾಬರ್ ಮ್ಯಾನ್)ನ ರಕ್ತ ಮ್ಯಾಚ್ ಆಗಿದೆ. ಮೂರು ನಾಯಿಗಳ ಶಾಂಪಲ್ ಗಳಲ್ಲಿ ಪೂಜಾರ್ ರವರ 3 ವಷ೯ದ ಡಾಬರ್ ಮ್ಯಾನ್ ತಳಿಯ ರಕ್ತವು ಹೊಂದಿಕೆಯಾಗಿದ್ದು ವೈದ್ಯಕೀಯ ನಿಯಮಾನುಸಾರ ಇದರ 300 ml ರಕ್ತವನ್ನು ಪರೀಕ್ಷಿಸಿದ ಕುತ್ತಿಗೆಯ ಭಾಗದಿಂದ 12 ನಿಮಿಷಗಳಲ್ಲಿ ಪಡೆದು ದೈಹಿಕವಾಗಿ ನಿತ್ರಾಣವಾಗಿದ್ದ ಲ್ಯಾಬರ್ ಡಾಗ್ ಗೆ ನೀಡಲಾಗಿದೆ.
ಪ್ರಾಣಿಯೊಂದು ಇನ್ನೊಂದು ಪ್ರಾಣಿಗೆ ರಕ್ತದಾನ ಮಾಡಿರುವ ಅಮೋಘವಾದ ಕಾಯ೯ ಪಶು ಚಿಕಿತ್ಸಾಲಯದಿಂದ ನಡೆದಿದೆ. “ದಾನಗಳಲ್ಲಿ ರಕ್ತದಾನವೆ ಶ್ರೇಷ್ಟ ದಾನ”ಎಂಬುದಕ್ಕೆ ಪ್ರಾಣಿಗಳೂ ಕೂಡ ಸಾಥ್ ಕೊಡಬಲ್ಲವು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಗರದ ಪಶು ಚಿಕಿತ್ಸಾಲಯವು ಪ್ರಾಣಿಗಳ ಕಾಳಜಿಯಲ್ಲಿ ತನ್ನ ಅಮೋಘವಾದ ಕತ೯ವ್ಯವನ್ನು ಮೆರೆದಿದ್ದು ಜನಮೆಚ್ಚುಗೆ ಪಡೆದಿದೆ.