ಸಂಗೀತಾ ಮಾಂತ್ರಿಕ ಎ.ಆರ್.ರೆಹಮಾನ್ ಪತ್ನಿಸೈರಾ ಭಾನು ಅವರಿಂದ ಡಿವೋರ್ಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಇಬ್ಬರು ಅಧಿಕೃತ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ರೆಹಮಾನ್ ಮಲಯಾಳಂನ ‘ಆಡು ಜೀವಿತಂ’ ಸಿನಿಮಾದ ಹಿನ್ನೆಲೆ ಸಂಗೀತಕ್ಕಾಗಿ ಪ್ರತಿಷ್ಠಿತ ಹಾಲಿವುಡ್ ಮ್ಯೂಸಿಕ್ ಇನ್ ಮೀಡಿಯಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಎಆರ್ ರೆಹಮಾನ್ ವಿದೇಶಿ ಭಾಷಾ ಚಲನಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನಿರ್ದೇಶಕ ಬ್ಲೆಸ್ಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಆಡು ಜೀವಿತಂ’ ಸಿನಿಮಾ ಅತ್ಯುತ್ತಮ ಹಾಡು ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಎರಡು ವಿಭಾಗಗಳು ನಾಮೀನೇಟ್ ಆಗಿತ್ತು.
ಲಾಸ್ ಏಂಜಲೀಸ್ ನಲ್ಲಿ ನಡೆದ ಸಮಾರಂಭದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಅತ್ಯುತ್ತಮ ಸಂಗೀತ ಸಂಯೋಜನೆ ಪ್ರಶಸ್ತಿಯನ್ನು ಎ.ಆರ್. ರೆಹಮಾನ್ ಅವರಿಗೆ ನೀಡಲಾಗಿದೆ. ಎ.ಆರ್. ರೆಹಮಾನ್ ಪರವಾಗಿ ಆಡು ಜೀವಿತಂ ಚಿತ್ರದ ನಿರ್ದೇಶಕರು ಈ ಪ್ರಶಸ್ತಿ ಸ್ವೀಕರಿಸಿದರು. ಚಿತ್ರದ ನಾಯಕ ನಟ ಪೃಥ್ವಿರಾಜ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಆಡುಜೀವಿತಂ – ದಿ ಗೋಟ್ಲೈಫ್ ಹಾಲಿವುಡ್ ಮ್ಯೂಸಿಕ್ ಇನ್ ಮೀಡಿಯಾ 2024 ಪ್ರಶಸ್ತಿಯನ್ನು ವಿದೇಶಿ ಚಲನಚಿತ್ರ ವಿಭಾಗದಲ್ಲಿ ಅತ್ಯುತ್ತಮ ಸಂಗೀತಕ್ಕಾಗಿ ಪ್ರಶಸ್ತಿ ಗೆದ್ದಿದೆ. ನಮ್ಮ ತಂಡಕ್ಕೆ ಇದೊಂದು ಉತ್ತಮ ಕ್ಷಣ. ಈ ಪ್ರಶಸ್ತಿ ಪಡೆದಿರುವುದು ನಮಗೆ ಗೌರವ ತಂದಿದೆ.
ಈ ಕ್ಷಣದಲ್ಲಿ ನಾನು ಎ.ಆರ್. ರೆಹಮಾನ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅಲ್ಲದೆ, ಇಡೀ ಚಿತ್ರತಂಡ ಒಟ್ಟಾಗಿ ಉತ್ತಮ ಕೆಲಸವನ್ನು ನೀಡಿದೆ. ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಪೃಥ್ವಿರಾಜ್ ಬರೆದುಕೊಂಡಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಖುಷಿ ಹಂಚಿಕೊಂಡಿರುವ ಎ.ಆರ್. ರೆಹಮಾನ್, ‘ಆಡು ಜೀವಿತಂ’ ಚಿತ್ರಕ್ಕಾಗಿ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ಪಡೆದಿರುವುದು ನನಗೆ ಗೌರವ ತಂದಿದೆ. ಈ ಅತ್ಯುತ್ತಮ ಪ್ರಶಸ್ತಿ ನೀಡಿದ ಹಾಲಿವುಡ್ ಮ್ಯೂಸಿಕ್ ಇನ್ ಮೀಡಿಯಾಗೆ ಧನ್ಯವಾದ ಎಂದಿದ್ದಾರೆ.
ಈ ಚಿತ್ರದ ಎಲ್ಲಾ ಸಂಗೀತಗಾರರು ಮತ್ತು ತಂತ್ರಜ್ಞರೊಂದಿಗೆ ಹಾಗೂ ನಿರ್ದೇಶಕ ಬ್ಲೆಸ್ಸಿ ಜೊತೆ ಸಂತೋಷವನ್ನು ಹಂಚಿಕೊಳ್ಳುತ್ತೇನೆ. ಎಂದು ಎ.ಆರ್ ರೆಹಮಾನ್ ತಿಳಿಸಿದ್ದಾರೆ.