ಕಟ್ಟಡ ಕಾರ್ಮಿಕನ ಆಕಸ್ಮಿಕ ಸಾವಿಗೆ ಆರ್ಕಿಟೆಕ್ಟ್ ಹೊಣೆಯಲ್ಲ: ರಾಜ್ಯ ಹೈಕೋರ್ಟ್

ಬೆಂಗಳೂರು

ಬೆಂಗಳೂರು: ಕಟ್ಟಡ ಕಾರ್ಮಿಕನ ಆಕಸ್ಮಿಕ ಸಾವಿಗೆ ಆರ್ಕಿಟೆಕ್ಟ್ ಹೊಣೆಯಲ್ಲ‌ ಎಂದು ಆರ್ಕಿಟೆಕ್ಟ್ ವಿರುದ್ಧದ ಪ್ರಕರಣವನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ. 2020ರ ಅಕ್ಟೋಬರ್ 10ರಂದು ವಿದ್ಯುತ್ ಅವಘಡದಿಂದ ಮುಕೇಶ್ ಎಂಬ ಕಟ್ಟಡ ಕಾರ್ಮಿಕ  ಸಾವಿಗೀಡಾಗಿದ್ದ. ಆರ್ಕಿಟೆಕ್ಟ್ ವಿಶ್ವಾಸ್ ಎಂಬುವವರು ಕಟ್ಟಡದ ನೀಲನಕ್ಷೆ ತಯಾರಿಸಿ ನೀಡಿದ್ದರು. ಆರ್ಕಿಟೆಕ್ಟ್ ಕೊಟ್ಟಿದ್ದ ನೀಲನಕ್ಷೆಯಲ್ಲಿನ ಲೋಪದಿಂದಾಗಿ ಕಟ್ಟಡ ಕಾರ್ಮಿಕ ಮುಕೇಶ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ನಂದಿನಿ ಲೇಔಟ್ ಪೊಲೀಸರು ಆರ್ಕಿಟೆಕ್ಟ್ ವಿರುದ್ಧ ಐಪಿಸಿ ಸೆಕ್ಷನ್‌ 304ಎ ಅಡಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಆದರೆ ಹೈ ಕೋರ್ಟ್, ಕಟ್ಟಡ ನಕ್ಷೆ ರೂಪಿಸುವುದು ನಿರ್ಲಕ್ಷ್ಯವಾಗುವುದಿಲ್ಲ. ನಿರ್ಲಕ್ಷ್ಯದಿಂದಾದ ಸಾವಿಗೆ ಆರ್ಕಿಟೆಕ್ ಹೊಣೆಯಲ್ಲ ಎಂದು ಆದೇಶಿಸಿ, ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯನ್ನು ರದ್ದುಪಡಿಸಿದೆ.

Leave a Reply

Your email address will not be published. Required fields are marked *