ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯೇನೋ ರಿಲೀಸ್ ಆಯ್ತು.ಅಧ್ಯಕ್ಷಗಿರಿ ಸಿಕ್ಕವರು ಖುಷಿಯಾದ್ರೆ,,ಸಿಗದವರು ನಾಯಕರ ವಿರುದ್ಧ ಬೇಸರಗೊಂಡಿದ್ದಾರೆ.ಕೆಲಸ ಮಾಡಿದವ್ರನ್ನ ಬಿಟ್ಟು ಆಪ್ತರಿಗೆ ಮಣೆಹಾಕಿದ್ದಾರೆ ಅಂತ ಗುರ್ ಅಂದಿದ್ದಾರೆ..ಇವ್ರ ಜೊತೆ ಕಾರ್ಯಕರ್ತರು ಪಟ್ಟಿ ಬಿಡುಗಡೆಯಾಗದಿದ್ದಕ್ಕೆ ಆಕ್ರೋಶ ಗೊಂಡಿದ್ದಾರೆ..ಶಾಸಕರ ಜೊತೆಯೇ ನಮ್ಮ ಪಟ್ಟಿಯನ್ನೂ ಬಿಡುಗಡೆ ಮಾಡಿದ್ರೆ ಏನಾಗ್ತಿತ್ತು ಅಂತ ಪ್ರಶ್ನಿಸಿದ್ದಾರೆ. ಯೆಸ್,ಏಳು ತಿಂಗಳ ನಂತ್ರ ನಿಗಮ ಮಂಡಳಿ ಅಧ್ಯಕ್ಷರ ನೇಮಕವಾಗಿದೆ..ಮೊದಲ ಹಂತದಲ್ಲಿ ೩೪ ಶಾಸಕರಿಗೆ ಗೂಟದ ಕಾರಿನ ಭಾಗ್ಯ ಲಭಿಸಿದೆ..
ಯಾರ್ಯಾರಿಗೆ ಅವಕಾಶ ಸಿಕ್ಕಿದೆ ಬಹಳ ಖುಷಿಯಾಗಿದ್ದಾರೆ..ತಮ್ಮ ನಾಯಕರನ್ನ ಭೇಟಿ ಮಾಡಿ ಅಭಿನಂದಿಸ್ತಿದ್ದಾರೆ..ಆದ್ರೆ ಸಿಗದ ಕೆಲವು ಶಾಸಕರು ನಾಯಕರ ವಿರುದ್ಧ ಆಕ್ರೋಶ ಗೊಂಡಿದ್ದಾರೆ..ನಮಗೂ ಮೊದಲ ಹಂತದಲ್ಲೇ ಸಿಗುತ್ತೆ ಅನ್ಬೋ ನಿರೀಕ್ಷೆ ಹುಸಿಯಾಗಿದೆ ಅಂತ ಬೇಸರಗೊಂಡಿದ್ದಾರೆ.. ಬಹಿರಂಗವಾಗಿ ಅಸಮಾಧಾನ ಹೊರಹಾಕದಿದ್ರೂ ತಮ್ಮ ಆಪ್ತರ ಮೂಲಕ ನೋವು ತೋಡಿಕೊಂಡಿದ್ದಾರೆ..ಹೊನ್ನಾಳಿ ಶಾಸಕ ಶಾಂತನಗೌಡ,ತಿಪಟೂರ್ ಶಾಸಕ ಷಡಕ್ಷರಿ ,ಕುಣಿಗಲ್ ಶಾಸಕ ರಂಗನಾಥ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ..
ಇನ್ನು ತಮಗೆ ಕೊಟ್ಟ ನಿಗಮಗಳ ಬಗ್ಗೆ ಕೆಲವು ಶಾಸಕರು ಸಮಾಧಾನಗೊಂಡು ನಾಯಕರನ್ನ ಭೇಟಿಮಾಡಿ ಸಂತೋಷ ವ್ಯಕ್ತಪಡಿಸ್ತಿದ್ದಾರೆ..ಆದ್ರೆ ಇನ್ನೂ ಕೆಲವು ಶಾಸಕರು ನಾವು ಕೇಳಿದ್ದೇ ಬೇರೆ,ಅವರು ಕೊಟ್ಟಿದ್ದೇಬೇರೆ ಅಂತ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ..ಶಿವಲಿಂಗೇಗೌಡ,ಹ್ಯಾರೀಸ್ ಕೇಳಿದಂತೆ ವಸತಿ ನಿಗಮ ಹಾಗೂ ಬಿಡಿಎ ಕೊಡಲಾಗಿದೆ..ಆದ್ರೆ ಭದ್ರಾವತಿ ಸಂಗಮೇಶ್,ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್,ಹೆಚ್ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ತಮ್ಮ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆನ್ನಲಾಗ್ತಿದೆ.ಇನ್ನು ಯಾವುದೇ ಅಸಮಧಾನ ಇಲ್ಲ ಎಂದು ಎಲ್ಲವೂ ನಿಮ್ಮ ಪ್ರಶ್ನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ.ಅಲ್ದೇ ಎಲ್ಲವೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಇನ್ನು ಶಾಸಕರಿಗೇನೋ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ರು ಆದ್ರೆ ನಮನ್ನ ಕಡೆಗಣಿಸಿದ್ರು ಅಂತ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ..ಪಕ್ಷ ಸಂಘಟನೆ ಮಾಡೋರು ನಾವು,ಫ್ಲೆಕ್ಸ್ ಬ್ಯಾನರ್ ಕಟ್ಟೋರು ನಾವು,ಮತದಾರರನ್ನ ಕರೆದು ಓಟ್ ಹಾಕ್ಸೋರು ನಾವು ಆದ್ರೆ ಶಾಸಕರಿಗೆ ಮೊದಲು ಕೊಟ್ಟಿದ್ದಾರೆ ಅಂತ ನೋವು ತೋಡಿಕೊಂಡಿದ್ದಾರೆ..ಶಾಸಕರಿಗೆ ಶಾಸಕಸ್ಥಾನವಾದ್ರೂ ಇದೆ ಆದ್ರೆ ನಮಗೇನಿದೆ ಲಾಭ ಅಂತ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ.ಅಲ್ದೇ ಅನೌನ್ಸ್ ಆಗಿರುವ ಪಟ್ಟಿಯನ್ನ ಯಾರು ಒಪ್ಪುತ್ತಾರೋ ಯಾರು ಒಪ್ಪೋವುದಿಲ್ಲ ಎಂದು ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಖಾರವಾಗಿ ಪತ್ರಿಕ್ರಿಯೆ ನೀಡಿದ್ದಾರೆ.
ಒಟ್ನಲ್ಲಿ, ಏಳು ತಿಂಗಳ ಬಳಿಕವಾದ್ರೂ ನಿಗಮ ಮಂಡಳಿ ಅಧ್ಯಕ್ಷರನ್ನ ನೇಮಕ ಮಾಡಿದ್ರು ಅನ್ನೋ ಉತ್ತರ ಸಿಕ್ಕಿದೆ..ಆದ್ರೆ ಕೊಟ್ಡ ನಿಗಮಗಳ ಬಗ್ಗೆಯೇ ಕೆಲವರು ಅಸಮಾಧಾನ ಹೊರಹಾಕಿದ್ರೆ,ಸಿಗದ ಶಾಸಕರು ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ..ಇನ್ನೂ ಪಟ್ಟಿ ವಿಳಂಬವಾಗಿದ್ದಕ್ಕೆ ಕಾರ್ಯಕರ್ತರು ಬುಸ್ಸ್ ಗುಡ್ತಿದ್ದಾರೆ..ಈ ಅಸಮಾಧಾನವನ್ನ ಹಿರಿಯ ನಾಯಕರು ಹೇಗೆ ಶಮನ ಮಾಡ್ತಾರೆ ಕಾದು ನೋಡ್ಬೇಕಿದೆ.