ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಭಾಗಿಯಾದ 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. 3 ಪ್ರತ್ಯಕ್ಷ ಸಾಕ್ಷಿಗಳು ಇವೆ. ಎಫ್ಎಸ್ಎಲ್ ಮಾತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳು ಇವೆ. ಈ ಪ್ರಕರಣದಲ್ಲಿ ಒಟ್ಟೂ 231 ಸಾಕ್ಷಿಗಳು ಇವೆ.
ಕೊಲೆ ಕೇಸ್ನಲ್ಲಿ ಇನ್ನೂ ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ ಸಿಆರ್ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ವಿಶೇಷ ಕೋರ್ಟ್ಗೆ ಪೊಲೀಸರು ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.
ಇನ್ನೂ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ರೇಣುಕಾಸ್ವಾಮಿ ಪ್ರಕರಣದ ಎ2 ಆರೋಪಿ, ನಟ ದರ್ಶನ್ ಚಾರ್ಜ್ಶೀಟ್ನಲ್ಲಿರುವ ಪುಟಗಳ ಸಂಖ್ಯೆಗಳನ್ನು ಕೇಳಿ ಕಂಗಾಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬರೋಬ್ಬರಿ 3991 ಚಾರ್ಜ್ಶೀಟ್ ಪುಟಗಳ ಮಾಹಿತಿ ತಿಳಿದು ಅಯ್ಯೋ! ಅಷ್ಟೊಂದಾ ಸಾಕ್ಷಿಗಳಾ ಎಂದು ದಂಗಾಗಿದ್ದಾರೆ ಎಂದು ತಿಳಿದು ಬಂದಿದೆ
ರೇಣುಕಾಸ್ವಾಮಿ ಪ್ರಕರಣದಲ್ಲಿ, ದರ್ಶನ್ ಮನೆ ಕೆಲಸದವರ ಹೇಳಿಕೆಗಳು, ಶೆಡ್ ಕೆಲಸಗಾರರ ಹೇಳಿಕೆಗಳು, ಸೆಕ್ಯೂರಿಟಿ ಹೇಳಿಕೆ ಪ್ರತಿ, ಶೆಡ್ ಗೆ ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳ ಪ್ರತಿಯನ್ನು ಕೂಡ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಕಿಡ್ನಾಪ್ ವೇಳೆ ಬಂದಿದ್ದ ಆಟೋ ಚಾಲಕನ ಹೇಳಿಕೆಯಿಂದ ಹಿಡಿದು ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿಗಳ ಬಗ್ಗೆಯೂ ಮಾಹಿತಿ ದಾಖಲಾಗಿದೆ..
ಅದಲ್ಲದೆ ಕೊಲೆ ಮಾಡಲು ಮೂಲ ಕಾರಣ ಪವಿತ್ರಾ ಗೌಡ. ಹೀಗಾಗಿ, ಅವರು ಎ1 ಆಗಿದ್ದಾರೆ. ಹಲ್ಲೆ ನಡೆಯುವ ಸ್ಥಳದಲ್ಲಿ ಅವರು ಹಾಜರಿದ್ದರು. ಚಪ್ಪಲಿಯಲ್ಲಿ ಅವರು ಹೊಡೆದಿದ್ದಾರೆ. ಕೃತ್ಯ ನಡೆದ ಸಮಯದಲ್ಲಿ ಪವಿತ್ರ ಗೌಡ ಅಲ್ಲೇ ಇರುವುದಕ್ಕೆ ಸಾಕ್ಷಿ ಸಿಕ್ಕಿದೆ. ಪವಿತ್ರ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟೀವ್ ಆಗಿತ್ತು