ಬೆಂಗಳೂರು:- ಗೃಹಜ್ಯೋತಿ ಬಳಕೆದಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯನವರು” ಗೃಹಜ್ಯೋತಿ ಯೋಜನೆಯಡಿ ಮಾಸಿಕ 48 ಯುನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ 70 ಲಕ್ಷ ಗ್ರಾಹಕರಿಗೆ ಇನ್ನುಮುಂದೆ ಮಾಸಿಕ 10% ಹೆಚ್ಚುವರಿ ವಿದ್ಯುತ್ ಬದಲಾಗಿ 10 ಯುನಿಟ್ ಹೆಚ್ಚುವರಿ ಉಚಿತ ವಿದ್ಯುತ್”ನೀಡುವುದಾಗಿ ಹೇಳಿದ್ದಾರೆ.
ಇನ್ನೂ ಮುಂದುವರೆದು ಪ್ರತಿ ಮನೆಗೆ ಭರವಸೆಯ ಬೆಳಕು ಹರಿಸುವ ಸರ್ಕಾರದ ಕಾರ್ಯಕ್ರಮ ಈಗ ಇನ್ನಷ್ಟು ಜನಸ್ನೇಹಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.