ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಕಳೆದ 4 ತಿಂಗಳಿನಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಗೆ ನಿನ್ನೆ ನಡೆದ ವಿಚಾರಣೆಯಲ್ಲಿ ಜಾಮೀನು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ರೆಡಿಯಾಗಿದ್ದಾರೆ. ಜಾಮೀನು ಸಿಗದೆ ನೋವಿನಲ್ಲಿರುವ ದರ್ಶನ್ ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಸರಿಯಾಗಿ ಕೂರಲು, ನಿದ್ದೆ ಮಾಡಲು ಸಾಧ್ಯವಾಗದೆ ಚಡಪಡಿಸುತ್ತಿದ್ದಾರೆ. ಅಷ್ಟಕ್ಕೂ ದರ್ಶನ್ ಗೆ ನಿಜವಾಗಿಯೂ ಬೆನ್ನು ನೋವಿದೆಯಾ ಎಂಬ ಅನುಮಾನ ಹಲವರಲ್ಲಿ ಶುರುವಾಗಿದೆ. ಹೌದು ಎನ್ನುತ್ತಿದೆ ವೈದ್ಯರು ನೀಡಿರುವ ವರದಿ.
ದರ್ಶನ್ ಜಾಮೀನು ಪಡೆಯಲು ಬೆನ್ನು ನೋವಿನ ಕಾರಣ ನೀಡುತ್ತಿದ್ದಾರೆ ಎಂದು ಕೆಲವರು ಅಂದುಕೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಬಳ್ಳಾರಿ ವಿಮ್ಸ್ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದು ಇದೀಗ ಜೈಲಧಿಕಾರಿಗಳಿಗೆ ರಿಪೋರ್ಟ್ ನೀಡಿದ್ದಾರೆನೀಡಿದ್ದಾರೆ. ಬೆನ್ನುನೋವು ನಿಯಂತ್ರಣಕ್ಕೆ ಫಿಜಿಯೋ ಥೆರಪಿಯ ಸಲಹೆ ನೀಡಲಾಗಿದ್ದು, ಇದರ ಜೊತೆಗೆ ಸ್ಕ್ಯಾನಿಂಗ್ ಮಾಡಿಸಲು ಸೂಚಿಸಿದ್ದಾರೆ. ಜೊತೆಗೆ ಕೆಲವು ಮಾತ್ರೆ, ಮೂಲಾಮುಗಳನ್ನು ಬರೆದುಕೊಟ್ಟಿದ್ದಾರೆ..
ನರಗಳಿಂದಲೇ ದರ್ಶನ್ಗೆ ಬೆನ್ನುನೋವು ಬಂದಿದೆ ಎಂದು ನರರೋಗ ತಜ್ಞ ಡಾ. ವಿಶ್ವನಾಥ್ ವರದಿಯಲ್ಲಿ ಹೇಳಿದ್ದಾರೆ. ಇಂದಿನಿಂದಲೇ ಜೈಲಿನಲ್ಲಿ ದರ್ಶನ್ಗೆ ಫಿಜಿಯೋ ಥೆರಪಿ ನೀಡಲು ಜೈಲಾಧಿಕಾರಿಗಳು ನಿರ್ಧರಿಸಿದ್ದಾರೆ. ವಿಮ್ಸ್ ವೈದ್ಯರಿಂದ ಫಿಜಿಯೋ ಥೆರಪಿ ನಡೆಯಲಿದೆ. ಮೆಡಿಕಲ್ ಬೆಡ್, ಚೇರ್ ನೀಡುವಂತೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಮೆಡಿಕಲ್ ಬೆಡ್, ಚೇರ್, ವೈದ್ಯಕೀಯ ಸಲಕರಣೆ ಹಾಗೂ ಕೆಲವು ಮಾತ್ರೆಗಳ ನೀಡುವಂತೆ ಕೋರಲಾಗಿದೆ. ಜೈಲು ವಿಭಾಗದ ಹಿರಿಯ ಅಧಿಕಾರಿಗಳ ಅನುಮತಿ ಸಿಕ್ಕ ಬಳಿಕ ಇದನ್ನು ದರ್ಶನ್ಗೆ ನೀಡುವ ಸಾಧ್ಯತೆ ಇದೆ.