ಹಲವರಿಗೆ ಕೆಟ್ಟ ಕನಸುಗಳು ಬೀಳುವುದು, ನಿದ್ರೆ ಬರದೇ ಇರುವುದು, ಆಗಾಗ ಎಚ್ಚರವಾಗುವುದು ಕಾಮನ್ ಆಗಿ ಬಿಟ್ಟಿದೆ.
ಮಲಗುವ ಮೊದಲು ಸಂಬಂಧಿತ ನಿದ್ರೆಯ ಮಂತ್ರಗಳನ್ನು ಪಠಿಸುವುದು ನಕಾರಾತ್ಮಕ ಶಕ್ತಿಗಳ ದಾಳಿಯಿಂದ ನಮಗೆ ಅಪಾರ ರಕ್ಷಣೆ ನೀಡುತ್ತದೆ ಎನ್ನಲಾಗುತ್ತದೆ.
ಹಾಗಾದ್ರೆ ಆ ಶ್ಲೋಕಗಳೇನು ಎಂಬುದು ಇಲ್ಲಿದೆ.
ಬೆಳಗ್ಗೆಯಿಂದ ರಾತ್ರಿವರೆಗೆ ದುಡಿದು ಸುಸ್ತಾದಾಗ ಮಲಗಿದ ನಿದ್ರೆ ಬರಬೇಕು. ಆದರೆ ಕೆಲವೊಮ್ಮೆ ನಮ್ಮ ನಿದ್ರೆ ಭಂಗವಾಗುತ್ತದೆ. ಅದಕ್ಕೆ ಕಾರಣ ಕನಸು. ಕೆಲ ಕನಸುಗಳು ನಮ್ಮನ್ನ ಬೆಚ್ಚಿ ಬೀಳಿಸುತ್ತವೆ. ಕೆಟ್ಟ ಕನಸಿನಿಂದ ಒಮ್ಮೆ ಎಚ್ಚರವಾದರೆ ಮತ್ತೆ ನಿದ್ರೆ ಬರುವುದಿಲ್ಲ. ಈ ರೀತಿ ಒಂದು ದಿನ ಆದರೆ ಚೆಂದ. ಆದರೆ ಪದೇ ಪದೇ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಅದು ನಿಮ್ಮ ನಿದ್ರೆಯ ಗುಣಮಟ್ಟ ಹಾಗೂ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ. ಅದರಲ್ಲೂ ಮಕ್ಕಳಿಗೆ ಈ ರೀತಿಯ ಕನಸು ಹೆಚ್ಚು ಬೀಳುತ್ತದೆ. ಈ ಕನಸುಗಳಿಂದ ಅವರ ನಿದ್ರೆ ಹಾಳಾಗುತ್ತದೆ. ಅದಕ್ಕೆ ಈ ಶ್ಲೋಕಗಳು ಪರಿಹಾರ ನೀಡುತ್ತದೆ.
ಸೂರ್ಯ ದೇವತೆಗೆ ಸಂಬಂಧಿಸಿದಂತೆ ‘ ಸೌರಸೂಕ್ತ ಅತ್ಯಂತ ಪವಿತ್ರವಾದ ಹಿಂದೂ ಧರ್ಮಗ್ರಂಥಗಳ ಭಾಗವಾಗಿದೆ. ಈ ಸೌರ ಸೂಕ್ತದಲ್ಲಿ ರಾತ್ರಿಸೂಕ್ತ ‘ ಕೂಡ ಇದೆ. ದೇವಿಯ ವಿವಿಧ ರೂಪಗಳಲ್ಲಿ ನಿದ್ರೆ ಕೂಡ ಒಂದು ರೂಪವಾಗಿದೆ. ನೀವು ಹಾಸಿಗೆಯ ಮೇಲೆ ಮಲಗಿರುವಾಗ ರಾತ್ರಿಸೂಕ್ತವನ್ನು ಎರಡು ಮೂರು ಬಾರಿ ಪಠಿಸಿದರೆ ಉತ್ತಮ ನಿದ್ರೆ ನಿಮ್ಮದಾಗುತ್ತದೆ.
ಯಾದೇವಿ ಸರ್ವಭೂತೇಷು ನಿದ್ರಾರೂಪೇಣ ಸಂಸ್ಥಿತಾ ।
ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯ ನಮೋನಮಃ ।।
ಅರ್ಥ : ಎಲ್ಲಾ ಜೀವಿಗಳಲ್ಲಿ ನಿದ್ರಾ ರೂಪದಲ್ಲಿ ಇರುವ ದೇವಿಗೆ ನಾನು ಮೂರು ಬಾರಿ ನಮನ ಸಲ್ಲಿಸುತ್ತೇನೆ .
ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಮ್ ।
ಶಯನೇ ಯಃ ಸ್ಮರೇನ್ನಿತ್ಯಂ ದುಃಸ್ವಪ್ನಸ್ತಸ್ಯ ನಶ್ಯತಿ ।।