ಬೆಳಿಗ್ಗೆ ಎದ್ದ ತಕ್ಷಣ ಪಾದಗಳು ಜುಮ್ಮೆನಿಸುವುದು, ಕೈಗಳಲ್ಲಿ ಸೂಜಿ ಚುಚ್ಚಿದ ಅನುಭವವಾಗುವುದು ಹೀಗೆಲ್ಲಾ ಆಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಕೈಕಾಲುಗಳಲ್ಲಿ ಜುಮ್ಮೆನಿಸುವಿಕೆ ಸಮಸ್ಯೆ ಆಗಾಗ ಕಾಡುತ್ತಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯಬೇಕಾಗಬಹುದು.ಪಾದಗಳು, ಪಾದದ ಅಡಿಭಾಗಗಳು ಮತ್ತು ಕೈಗಳಲ್ಲಿ ಸೂಜಿ ಚುಚ್ಚಿದ ನೋವಿನ ಅನುಭವವಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.ಈ ಸಮಸ್ಯೆಗಳು ಈ 5 ಗಂಭೀರ ಕಾಯಿಲೆಗಳ ಲಕ್ಷಣಗಳಾಗಿರಬಹುದು.
ಮಧುಮೇಹದಲ್ಲಿ,ರಕ್ತದ ಸಕ್ಕರೆಯ ಮಟ್ಟ ವಿಪರೀತ ಏರುತ್ತದೆ.ಇದರಿಂದ ನರಮಂಡಲವು ಹಾನಿಗೊಳಗಾಗುತ್ತದೆ.ಹಾಗಾಗಿ ಪದೇ ಪದೇ ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವ ಸಮಸ್ಯೆ ಉಂಟಾಗುತ್ತದೆ.ಅಲ್ಲದೆ ಕೈ ಮತ್ತು ಕಾಲುಗಳಲ್ಲಿ ಮರಗಟ್ಟಿದ ಹಾಗೆ ಕೂಡಾ ಆಗುವುದು.ಅನಿಯಂತ್ರಿತ ಮಧುಮೇಹದಲ್ಲಿ ಈ ಎರಡೂ ಲಕ್ಷಣಗಳು ತುಂಬಾ ಸಾಮಾನ್ಯವಾಗಿದೆ.
ಅನೇಕ ಬಾರಿ,ಸ್ಲಿಪ್ಡ್ ಡಿಸ್ಕ್ ಸಮಸ್ಯೆಯಿಂದಾಗಿ,ಕಾಲುಗಳಿಗೆ ಸಂಪರ್ಕಗೊಂಡಿರುವ ನರಗಳು ಸಂಕುಚಿತಗೊಳ್ಳುತ್ತವೆ.ಇದು ಪಾದಗಳ ಮರಗಟ್ಟುವಿಕೆಗೆ ಕಾರಣವಾಗಬಹುದು ಮತ್ತು ಪಾದಗಳಲ್ಲಿ ಜುಮ್ಮೆನಿಸುವಿಕೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನು ಕಾರ್ಪಲ್ ಟನಲ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ.
ವಿಷವನ್ನು ಫಿಲ್ಟರ್ ಮಾಡುವ ಪ್ರಕ್ರಿಯೆಯಲ್ಲಿ ಮೂತ್ರಪಿಂಡಗಳು ಹಾನಿಗೊಳಗಾಗಬಹುದು.ಇದರಿಂದ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ತೊಂದರೆಯಾಗುತ್ತದೆ.ಮೂತ್ರಪಿಂಡದ ಕಾರ್ಯಚಟುವಟಿಕೆಯಲ್ಲಿನ ಕ್ಷೀಣತೆಯು ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆಗೆ ಕಾರಣವಾಗಬಹುದು.
ವಿಟಮಿನ್ ಇ ಮತ್ತು ವಿಟಮಿನ್ ಬಿ ಕೊರತೆಯಂತಹ ಕೆಲವು ಪೋಷಕಾಂಶಗಳ ಕೊರತೆಯು ದೇಹದಲ್ಲಿ ಜುಮ್ಮೆನಿಸುವಿಕೆಗೆ ಕಾರಣವಾಗಬಹುದು. ದೇಹದಲ್ಲಿ ಪೋಷಕಾಂಶಗಳ ಕೊರತೆಯ ಈ ಲಕ್ಷಣಗಳು ಕಂಡು ಬಂದರೆ ಖಂಡಿತವಾಗಿಯೂ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕು