ಬೆಂಗಳೂರು:– ಮಾನ್ಯ ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆ ನೋಡಲೇಬೇಕಾದ ಸ್ಟೋರಿ ಇದು
ಪೊಲೀಸ್ ಪೇದೆಗಳ ಟೋಪಿಗಳಿಗೆ ಕಿಂಚಿತ್ತೂ ಬೆಲೆ ಇಲ್ವಾ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ರಸ್ತೆ ಬದಿಯಲ್ಲಿ ಮದ್ಯದ ಬಾಟಲಿಗಳ ಮಧ್ಯೆ ಕಸದಂತೆ ಪೊಲೀಸ್ ಪೇದೆ ಟೋಪಿಗಳು ಬಿದ್ದು ನಾರುತ್ತಿವೆ.
ರೇಸ್ ಕೋರ್ಸ್ ರಸ್ತೆಯ ಸಚಿವರುಗಳ ಅಧಿಕೃತ ನಿವಾಸದ ಬಳಿಯೇ ಇಂತಹ ನಾಚಿಕೆಗೇಡಿನ ಘಟನೆ ಜರುಗಿದೆ.
ಸಾರ್ವಜನಿಕರ ರಕ್ಷಣೆಗೆ ಇರುವ ಪೊಲೀಸರ ಸಮವಸ್ತ್ರಕ್ಕೆ ರಕ್ಷಣೆ ಇಲ್ಲವಾ ಎಂಬ ಪ್ರಶ್ನೆ ಉದ್ಭವಿಸಿದೆ