ನಟ ಅರ್ಜುನ್ ಸರ್ಜಾ(Arjun Sarja) ಪುತ್ರಿ ಐಶ್ವರ್ಯಾ(Aishwarya Sarja) ಅವರು ತಮಿಳು ನಟ ಉಮಾಪತಿ ರಾಮಯ್ಯ ಜೊತೆ ಮದುವೆಯಾಗ್ತಿದ್ದಾರೆ (Wedding) ಎಂಬ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ಆದರೆ ಈಗ ನಟನೆಯತ್ತ ಐಶ್ವರ್ಯಾ ಮುಖ ಮಾಡಿದ್ದಾರೆ. ಮಗಳಿಗೆ ನಿರ್ದೇಶನ ಮಾಡೋದಕ್ಕೆ ಅರ್ಜುನ್ ಅರ್ಜಾ ರೆಡಿಯಾಗಿದ್ದಾರೆ.
‘ಪ್ರೇಮಬರಹ’ (Premabaraha) ಸಿನಿಮಾ ಮೂಲಕ ಕನ್ನಡ ಮತ್ತು ಕಾಲಿವುಡ್ಗೆ (Kollywood) ಪರಿಚಿತರಾದ ನಟಿ ಐಶ್ವರ್ಯಾ ಸರ್ಜಾ ಅವರು ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅರ್ಜುನ್ ಸರ್ಜಾ ಅವರು ನಿರ್ದೇಶನದ ಜೊತೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಒಂದೊಳ್ಳೆ ಪ್ರೇಮ ಕಥೆಯನ್ನ ತೆರೆಯ ಮೇಲೆ ತೋರಿಸಲು ರೆಡಿಯಾಗಿದ್ದಾರೆ. ಈಗಾಗಲೇ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮುಂದಿನ ಸೋಮವಾರದಿಂದ ಚಿತ್ರದ ಶೂಟಿಂಗ್ ಶುರು ಮಾಡಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.
ಬಹುಭಾಷೆಗಳಲ್ಲಿ ಮೂಡಿ ಬರುವ ಈ ಚಿತ್ರಕ್ಕೆ ಐಶ್ವರ್ಯಾ ಸರ್ಜಾಗೆ ಉಪೇಂದ್ರ (Upendra) ಅವರ ಅಣ್ಣನ ಮಗ ನಿರಂಜನ್ (Niranjan) ಸುಧೀಂದ್ರ ಅವರು ಹೀರೋ ಆಗಿ ಫೈನಲ್ ಆಗಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ಬಾಹುಬಲಿ ಖ್ಯಾತಿಯ ಕಟ್ಟಪ್ಪ, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿಲಿದ್ದಾರೆ
ಮೊದಲ ಬಾರಿಗೆ ಐಶ್ವರ್ಯಾ- ನಿರಂಜನ್ ತೆರೆಯ ಮೇಲೆ ಜೋಡಿಯಾಗುತ್ತಿದ್ದು, ನವಿರಾದ ಪ್ರೇಮಕಥೆ ಜೊತೆಗೆ ಆ್ಯಕ್ಷನ್ ಕೂಡ ಇರಲಿದೆ. ಸದ್ಯ ಈ ನ್ಯೂಸ್ ಕೇಳಿ ಸಿನಿ ಪ್ರಿಯರು ಥ್ರಿಲ್ ಆಗಿದ್ದಾರೆ. ನಯಾ ಜೋಡಿಯನ್ನ ನೋಡೋಕೆ ಕಾಯ್ತಿದ್ದಾರೆ.