ಬಾಲಿವುಡ್ ನಟ ಅನಿಲ್ ಕಪೂರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಓಟಿಟಿ ಸೀಸನ್ 3 ದಿನೇ ದಿನೇ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಆಗಿರೋದು ಅರ್ಮಾನ್ ಮಲಿಕ್ ನಡೆ. ಇಬ್ಬರು ಪತ್ನಿಯರೊಂದಿಗೆ ಬಿಗ್ ಬಾಸ್ಗೆ ಬಂದಿದ್ದ ಅರ್ಮಾನ್ ಮಲ್ಲಿಕ್ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅರ್ಮಾನ್ ರ ಮೊದಲ ಪತ್ನಿ ಪಾಯಲ್ ಎಲಿಮಿನೇಟ್ ಆದರೆ ಎರಡನೇ ಪತ್ನಿ ಕೃತಿಕಾ ಇನ್ನೂ ಬಿಗ್ ಬಾಸ್ ಮನೆಯಲ್ಲೇ ಇದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಅರ್ಮಾನ್ ಹಾಗೂ ಕೃತಿಕಾ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬ ರೀತಿಯ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದ ಅನೇಕರು ಆಕ್ರೋಶ ಹೊರ ಹಾಕಿದ್ದು ತಕ್ಷಣವೇ ಅವರನ್ನು ಮನೆಯಿಂದ ಹೊರ ಹಾಕಿ ಎಂದಿದ್ದರು. ಇದೀಗ ಇವರನ್ನು ಬಂಧಿಸುವಂತೆ ಶಿವಸೇನಾ ಕಾರ್ಯದರ್ಶಿ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅರ್ಮಾನ್ ಹಾಗೂ ಕೃತಿಕಾ ಸೆಕ್ಸ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿವಸೇನಾ ಕಾರ್ಯದರ್ಶಿ ಮತ್ತು ವಕ್ತಾರರಾದ ಶಾಸಕಿ ಡಾ. ಮನೀಶಾ ಕಯಾಂಡೆ ಖಂಡಿಸಿದ್ದಾರೆ. ಈ ಕಾರ್ಯಕ್ರಮವು ಅಸಭ್ಯತೆಯನ್ನು ಉತ್ತೇಜಿಸುತ್ತದೆ ಎಂದು ಟೀಕಿಸಿದ್ದಾರೆ. ‘ಅಶ್ಲೀಲತೆಯನ್ನು ತೋರಿಸುತ್ತಿದ್ದರೂ ಯಾವುದಕ್ಕೂ ಚಿಂತಿಸದೆ ಶೂಟಿಂಗ್ ಮುಂದುವರೆಸುತ್ತಿದ್ದಾರೆ. ಮುಂಬೈ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದೀವಿ ಹಾಗೂ ಅವರಿಗೆ ಪತ್ರ ಬರೆಯುತ್ತೀವಿ. ರಿಯಾಲಿಟಿ ಶೋನಲ್ಲಿ ಈ ರೀತಿ ಅಶ್ಲೀಲ ದೃಶ್ಯ ತೋರಿಸಬಾರದು…ಯುವಕರ ಮನಸ್ಥಿತಿಯನ್ನು ಬದಲಾಯಿಸುತ್ತದೆ’ ಎಂದು ಹೇಳಿದ್ದಾರೆ.