ಹೈದರಾಬಾದ್:- ತೆಲಂಗಾಣದ ಮಹೆಬೂಬ್ ನಗರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರ ಹೃದಯ ಗೆದ್ದಿದ್ದಾರೆ.
ಸಮಾವೇಶಕ್ಕೆ ಬಂದಿದ್ದ ವಿಶೇಷ ಚೇತನರನ್ನು ಗುರುತಿಸಿ ಅವರಿಗೆ ಕೂಡಲು ಆಸನದ ವ್ಯವಸ್ಥೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿಶೇಷ ಚೇತನ ಸಹೋದರಿಯರು ನನಗೆ ಆಶೀರ್ವಾದ ನೀಡಲು ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಮುಂದೆ ಬರಲು ಅವಕಾಶ ಮಾಡಿಕೊಡಿ. ಮುಂದೆ ನಿಂತಿರುವ ಪ್ರೀತಿಯ ಜನಗಳೇ ಅವರಿಗೆ ದಾರಿ ಬಿಡಿ. ವಿಶೇಷ ಚೇತನರು ಹಲವು ಗಂಟೆಗಳಿಂದ ಕಷ್ಟ ಪಡುತ್ತಿದ್ದಾರೆ. ಅವರ ನೋವು ನೋಡಲು ಸಾಧ್ಯವಿಲ್ಲ. ಅವರಿಗೆ ಸಭೆಯ ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಿ. ವಿಶೇಷ ಚೇತನರಿಗೆ ವ್ಯವಸ್ಥೆ ಕಲ್ಪಿಸುವವರಗೆ ನಾನು ಭಾಷಣ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆ ತಕ್ಷಣವೇ ಸಮಾವೇಶದಲ್ಲಿ ನೆರದಿದ್ದ ಜನರು ವಿಶೇಷ ಚೇತನಿಗೆ ದಾಳಿ ಮಾಡಿಕೊಟ್ಟಿದ್ದಾರೆ. ಅಲ್ಲದೇ ವಿಶೇಷ ಚೇತರನ್ನು ಎತ್ತಿಕೊಂಡು ಬಂದು ವ್ಹೀಲ್ ಚೇರ್ನಲ್ಲಿ ಸಮಾವೇಶದಲ್ಲಿ ಮುಂಭಾಗದಲ್ಲಿ ಕರೆದುಕೊಂಡು ಬಂದು ಕೂಡಿಸಿದ್ದಾರೆ. ಇನ್ನು ಮೋದಿಯವರ ವಿಶೇಷ ಚೇತನರ ಬಗೆಗಿನ ಕಾಳಜಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಪ್ಪಾಳೆ, ಶಿಳ್ಳೆ ಹಾಕಿದರು.