ಬೆಂಗಳೂರು:- ಶಾಲೆಗೆ ಹೋಗಲು ಬಸ್ ಕಲ್ಪಿಸುವಂತೆ ಸಿಎಂಗೆ ಪತ್ರ ಬಾಲಕಿ ಪತ್ರ ಬರೆದಿದ್ದಾರೆ. ತಾವರಕೆರೆ ವ್ಯಾಪ್ತಿಯ ಸೀಗೆಹಳ್ಳಿಯ ವಿದ್ಯಾರ್ಥಿನಿ ಹರ್ಷಿನ್ ವಿ.ವೈ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಸೀಗೆಹಳ್ಳಿಯಿಂದ ಬೆಂಗಳೂರು ಸುಮಾರು 25 ಕಿಲೋಮಿಟರ್ ದೂರವಿದೆ. ಈ ವ್ಯಾಪ್ತಿಯಲ್ಲೇ ಬಿಎಂಟಿಸಿ ವಾಯುವ್ಯ ವಿಭಾಗದ ಬಸ್ ಡಿಪೋ ಇದೆ. ಈ ಭಾಗದಿಂದ ಅನೇಕ ಕಡೆ ಬಸ್ ಗಳ ವ್ಯವಸ್ಥೆಯನ್ನು ಬಿಎಂಟಿಸಿ ಕಲ್ಪಿಸಿದೆ. ಆದರೆ ಇದರ ಅಕ್ಕಪಕ್ಕದಲ್ಲಿರುವ ಜಟ್ಟಿಪಾಳ್ಯ, ಸೀಗೆಹಳ್ಳಿ, ವನಗನಹಟ್ಟಿ, ಚನ್ನೇನಹಳ್ಳಿಯಿಂದ ಬೆಂಗಳೂರಿಗೆ ಬಸ್ ಗಳ ವ್ಯವಸ್ಥೆಯೇ ಇಲ್ಲ. ಸೀಗೆಹಳ್ಳಿಯಿಂದ ಅನೇಕ ಕಡೆ ಬಸ್ ಗಳನ್ನು ಬಿಡಲಾಗುತ್ತಿದೆ. ಆದರೆ ಬಹುತೇಕ ಮಕ್ಕಳು ತೆರಳುವ ಶ್ರೀನಗರ ಬಸ್ ನಿಲ್ದಾಣಕ್ಕೆ ಬಸ್ ಗಳನ್ನು ಬಿಡಲಾಗುತ್ತಿಲ್ಲ. ಬೆಂಗಳೂರಿನಲ್ಲಿರುವ ಶಾಲಾ- ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ಬಸ್ ಗಳಿಲ್ಲದೆ ತೊಂದರೆಯಾಗುತ್ತಿದೆ ಎಂದು ಬಾಲಕಿ ಹರ್ಷಿನ್ ಅಳಲು ತೋಡಿಕೊಂಡಿದ್ದಾಳೆ.
ಈ ಬಗ್ಗೆ ಹಿಂದೆಯೇ ಮನವಿ ಮಾಡಿದ್ದರು ಬಿಎಂಟಿಸಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಇಲ್ಲಿಂದ ರಾಯರ ದೇವಸ್ಥಾನಕ್ಕೆ ಗಂಟೆಗೊಂದು ಬಸ್ ವ್ಯವಸ್ಥೆ ಕಲ್ಪಿಸುವ ಬಿಎಂಟಿಸಿ ಅತ್ಯಧಿಕ ಮಕ್ಕಳು ತೆರಳುವ ಶ್ರೀನಗರಕ್ಕೆ ಬಸ್ ಗಳನ್ನೇಕೆ ಬಿಡುತ್ತಿಲ್ಲ. ನಮಗೆ ಬೇಕಿರುವುದು ಪ್ರಸಾದದ ಹಸಿವಲ್ಲ. ವಿದ್ಯೆಯ ಹಸಿವು. ಅದಕ್ಕಾಗಿ ಬಸ್ ಬಿಡಬೇಕು. ಅಲ್ಲದೇ ಡಾ. ಬಿ ಆರ್ ಅಂಬೇಡ್ಕರ್ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಪ್ರತಿ ಜಿಲ್ಲೆ ಮತ್ತು ತಾಲೂಕು ಹಳ್ಳಿಯಲ್ಲಿ ವಿಶೇಷ ಸಾರಿಗೆ ಬಸ್ಗಳನ್ನು ಆರಂಭಿಸಬೇಕಾಗಿ ಮಾನ್ಯ ಮುಖ್ಯಮಂತ್ರಿ, ಸಾರಿಗೆ ಸಚಿವರು, ಶಿಕ್ಷಣ ಸಚಿವರಲ್ಲಿ ಕಳಕಳಿಯಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಪತ್ರ ಬರೆದಿದ್ದಾಳೆ.
ಶಾಲೆಗೆ ಹೋಗಲು ತನ್ನಂತೆಯೇ ಅನೇಕ ಮಕ್ಕಳು ಪಡುತ್ತಿರುವ ಕಷ್ಟ ಪರಿಹರಿಸಲು ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡಿರುವುದಕ್ಕೆ ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.