ಬೆಂ ದಕ್ಷಿಣ: ಹುಡುಗಿಯನ್ನು ಬಳಸಿಕೊಂಡು ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುತಿದ್ದ ಸುಲಿಗೆಕೋರರನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಬಂಧಿತ ಅರೋಪಿಗಳಾದ , ರುತೀಕ್ ,ಮಹಮ್ಮದ್ ಯಾಸೀನ್ ಸಮೀರ್ ಮಹಮ್ಮದ್ ಶಾಹೀದ್ ಅಲಿ ..ಇನ್ನು ಬಂದಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಹಾಗೂ ಚಿನ್ನದ ವಡವೆ ಮತ್ತು ಐಪೋನ್ ವಶಕ್ಕೆ ಪಡೆಯಲಾಗಿದೆ. ಹೌದು ಜನವರಿ 12ನೇ ತಾರೀಖಿನಂದು ಜೆ.ಪಿ ನಗರ ವಾಸಿ ಶಶಾಂಕ್ ಇನ್ಸಾ ಗ್ರಾಂ ಮೆಸೆಂಜರ್ ಮೂಲಕ ಹುಡುಗಿಯೊಬ್ಬಳು ಪರಿಚಯ ಮಾಡಿಕೊಂಡು ಅಕೆಯನ್ನ ಬನ್ನೇರುಗಟ್ಟದ ಹಕ್ಕಿಪಿಕ್ಕಿ ಕಾಲೋನಿ ಬಳಿ ಕರಸಿಕೊಮಡಿದರಂತೆ.
ಈ ವೇಳೆ ರುತಿಕ್ ಹಾಗೂ ಗ್ಯಾಂಗ್ ಶಶಾಂಕ್ ಜೊತೆ ಬಂದಿದ್ದ ಹುಡುಗಿ ಮೇಲೆ ದಾಳಿ ಮಾಡಿ ಏನು ಮಾಡುತ್ತಿದ್ದೀಯಾ ಎಂದು ಬೆದರಿಸಿ ದೊಣ್ಣೆಯಿಂದ ಹೊಡೆದು 4 ಜನ ಆರೋಪಿಗಳು ಶಶಾಂಕ್ ಐಫೋನ್, ಚಿನ್ನದ ಕತ್ತಿನ ಸರ ಮತ್ತು ಚಿನ್ನದ ಉಂಗುರಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಿದ್ರು ಪ್ರಕರಣ ಕೈಗೆತ್ತಿಕೊಂಡಿದ್ದ ಪೊಲೀಸ್ರು ತನಿಖೆಯ ನಡೆಸಿದಾಗ ಶಶಾಂಕ್ ನ ಕ್ಲಾಸ್ ಮೇಟ್ ರುತಿಕ್ ಅಲ್ಲದೇ ಹುಡುಗಿಯನ್ನು ಸೆಟ್ ಮಾಡಿದ್ದು ಸಹ ರುತಿಕ್ ಅಂತ ಪೊಲೀಸ್ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ…